ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜಮೀನಿನ ಹಣಕಾಸು ವಿವಾದ: ಚಿಕ್ಕಪ್ಪನನ್ನೇ ಕೊಂದ ಮಗ

ದಿಗಂತ ವರದಿ ಮೈಸೂರು:

ಒಂದು ಗುಂಟೆ ಜಮೀನಿನ ಹಣಕಾಸು ವಿವಾದ ಹಿನ್ನಲೆಯಲ್ಲಿ ಅಣ್ಣನ ಮಗನೇ ತನ್ನ ಚಿಕ್ಕಪ್ಪನನ್ನು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕು ಆಲಂಬೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಲಕ್ಷ÷್ಮಣ (50) ವರ್ಷ ಕೊಲೆಯಾದ ವ್ಯಕ್ತಿ. ಈತನ ಅಣ್ಣನ ಮಗ ಸಿದ್ದರಾಜು ಕೊಲೆ ಆರೋಪಿ.
ಒಂದು ಗುಂಟೆ ಜಮೀನಿನ ಹಣಕಾಸು ವಿಚಾರದಲ್ಲಿ ತಕರಾರು ನಡೆದಿದ್ದು, ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದು, ಇದರಿಂದ ರೊಚ್ಚಿಗೆದ್ದ ಅಣ್ಣನ ಮಗ ಚಾಕುವಿನಿಂದ ತನ್ನ ಚಿಕ್ಕಪ್ಪನನ್ನು ಇರಿದು ಕೊಂದಿದ್ದಾನೆ.
ಈ ಬಗ್ಗೆ ಮೃತನ ಮಗಳು ಚೈತ್ರಾ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು, ವೃತ್ತನಿರೀಕ್ಷಕ ಲಕ್ಷಿ÷್ಮಕಾಂತ ತಳವಾರ್ ಬಿಳಿಗೆರೆ ಠಾಣೆ ಪಿಎಸ್‌ಐ ಭೇಟಿ ನೀಡಿ ಮಹಜರು ನಡೆಸಿದರು.
ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss