ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಜೆಕ್ಷನ್ ಪಡೆಯೋಕೆ ಕೆಲವರು ಭಯಪಡುತ್ತಾರೆ ಅಂತದ್ದರಲ್ಲಿ ಈ ಬಾಲಕಿ ದೊಡ್ಡ ಸರ್ಜರಿ ಎದುರಿಸಬೇಕಿದ್ದರೂ ಎದೆಗುಂದದೆ ಧೈರ್ಯವಾಗಿರುವ ವಿಡಿಯೋ ಎಲ್ಲರ ಮನಮುಟ್ಟುವಂತಿದೆ. ಹೃದಯ ಮತ್ತು ಬೆನ್ನುಮೂಳೆಯ ಪ್ರಮುಖ ಶಸ್ತ್ರಚಿಕಿತ್ಸೆಗಾಗಿ ಆಪರೇಷನ್ ಥಿಯೇಟರ್ ಒಳಗೆ ಹೋಗುವಾಗ ‘ಸೆಲೆಬ್ರೇಟ್’ ಎನ್ನುತ್ತಾ ಮಗುವಿನ ಡ್ಯಾನ್ಸ್ ಎಲ್ಲರ ಮನ ತಟ್ಟಿತು.
ಪೀಪಲ್ ಮ್ಯಾಗಜೀನ್ ಈ ವೀಡಿಯೊವನ್ನು ಹಂಚಿಕೊಂಡಿದೆ. ಚಿಕ್ಕ ಹುಡುಗ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಆಕರ್ಷಕವಾಗಿ ನೃತ್ಯ ಮಾಡುತ್ತಾನೆ. ಹಾಸ್ಪಿಟಲ್ ಗೌನ್ ಧರಿಸಿ ಕಾರಿಡಾರ್ ಮೇಲೆ ಹೆಜ್ಜೆ ಹಾಕಿದ್ದಾನೆ. ಈತನಿಗಾಗಿ ಆಸ್ಪತ್ರೆ ಸಿಬ್ಬಂದಿ ಕೂಡ ಅವರನ್ನು ಹುರಿದುಂಬಿಸಿದರು.
ವೈರಲ್ ಆಗಿರುವ ಹುಡುಗನ ವೀಡಿಯೋ ನೋಡಿದರೆ ಯಾರಿಗಾದರೂ ಪುಳಕವಾಗುತ್ತದೆ. ಈ ವೀಡಿಯೋ ನೋಡಿದವರೆಲ್ಲ ಬಾಲಕನ ಡ್ಯಾನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಆತ ಸಂಪೂರ್ಣ ಆರೋಗ್ಯವಾಗಿರಲಿ ಎಂದು ಹಾರೈಸಿದ್ದಾರೆ.