CINE NEWS | ಟ್ರೆಂಡಿಂಗ್ ಆಯ್ತು ಬಾಯ್‌ಕಾಟ್ ಪಠಾಣ್, ಚಿತ್ರಕ್ಕೆ ಸೋಲಿನ ಭೀತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುನಿರೀಕ್ಷಿತ ಪಠಾಣ್ ಸಿನಿಮಾಕ್ಕೆ ಇದೀಗ ಸೋಲಿನ ಭೀತಿ ಎದುರಾಗಿದೆ.
ಅದ್ಧೂರಿಯಾಗಿ ನಿರ್ಮಾಣವಾಗಿರುವ ಈ ಸಿನಿಮಾಗೆ ಕಂಟಕವಾಗಿರುವುದು ಒಂದೇ ಹಾಡು, ಹೌದು, ಬೇಷರಮ್ ರಂಗ್ ಹಾಡಿನಲ್ಲಿ ದೀಪಿಕಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿದ್ದಾರೆ. ಇದನ್ನು ಕೆಲವರು ಅಶ್ಲೀಲ ಎನ್ನುತ್ತಿದ್ದಾರೆ.

ಇದರ ಜೊತೆಗೆ ಕೇಸರಿ ಬಣ್ಣದ ಬಿಕಿನಿ ತೊಟ್ಟು ಬೇಷರಮ್ ರಂಗ್ ಎಂದು ಹಾಡಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. ಕೇಸರಿ ಬಣ್ಣದ ಬಟ್ಟೆ ತೊಟ್ಟ ದೀಪಿಕಾ ಅವರ ವಿರುದ್ಧವೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಸಿನಿಮಾ ಮಾಡಿ ಬಾಲಿವುಡ್‌ನಲ್ಲಿ ಪ್ರಸಿದ್ಧಿ ಪಡೆದಿರುವ ನಟಿ ಇಷ್ಟೊಂದು ಎಕ್ಸ್‌ಪೋಸ್ ಮಾಡಿ ಪ್ರಚಾರ ಪಡೆಯಬೇಕೇ ಎನ್ನುವುದು ಹಲವರ ವಾದವಾಗಿದೆ.
ಜನವರಿ 25 ರಂದು ಸಿನಿಮಾ ತೆರೆಕಾಣಲಿದ್ದು, ಚಿತ್ರಕ್ಕೆ ಸೋಲಿನ ಭೀತಿ ಎದುರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!