ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹುಡುಗಿಯರಲ್ಲಿನ ಈ attitude problems ನಿಂದ ಹುಡುಗರು ರೋಸಿಹೋಗಿದ್ದಾರಂತೆ.. ಈ ಸಮಸ್ಯೆ ಇದ್ದರೆ ಇಂದೇ ಸರಿಪಡಿಸಿಕೊಳ್ಳಿ..

ಸಂಬಂಧದಲ್ಲಿ ಕೆಲವೊಂದನ್ನು ಒಪ್ಪಿಕೊಳ್ಳಲೇಬೇಕು. ಇನ್ನು ಕೆಲವನ್ನು ಬದಲಾಯಿಸಿಕೊಳ್ಳಬೇಕು. ಆದರೆ ಆಟಿಟ್ಯೂಡ್ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸಿಕೊಳ್ಳದೇ ಮುಂದೆ ಹೋಗಲು ಸಾಧ್ಯವೇ ಇಲ್ಲ. ಹುಡುಗರು ಏನನ್ನಾದರೂ ಅಡ್ಜಸ್ಟ್ ಮಾಡಿಕೊಳ್ಳುತ್ತಾರೆ. ಆದರೆ ಆಟಿಟ್ಯೂಡ್ ತೋರಿಸುವ ಹುಡುಗಿಯರನ್ನು ಇಷ್ಟಪಡುವುದಿಲ್ಲ. ಯಾವ ರೀತಿ ಆಟಿಟ್ಯೂಡ್? ನೋಡಿ..

  • ನೆಗೆಟಿವ್ ಆಟಿಟ್ಯೂಡ್: ಯಾವ ಕೆಲಸಕ್ಕಾದರೂ ವಿಷಯಕ್ಕಾದರೂ ಮೊದಲೇ ಅಡ್ಡಬಾಯಿ ಹಾಕುವುದು, ಬೇಡ ಎನ್ನುವುದು ಹುಡುಗರಿಗೆ ಹಿಡಿಸುವುದಿಲ್ಲ.
  • ಕಂಪೇರ್: ಬೇರೆಯವರ ಜೊತೆ ತಮ್ಮನ್ನು ಹೋಲಿಕೆ ಮಾಡುವ ಹುಡುಗಿಯರ ಬುದ್ಧಿ ಹುಡುಗರಿಗೆ ಇಷ್ಟವಾಗೋದಿಲ್ಲ.
  • ಮೇಲು-ಕೀಳು: ಹುಡುಗರ ಈಗೋ ಬದಲಾಯಿಸಲು ಹೋಗಿ ತಾನು ಮೇಲು ನೀನು ಕೆಳಗೆ ಎನ್ನುವ ಆಟಿಟ್ಯೂಡ್ ಇರುವ ಹುಡುಗಿಯರನ್ನು ಯಾರೂ ಪ್ರೀತಿಸುವುದಿಲ್ಲ.
  • ಜಲಸ್ ಹುಡುಗಿ: ಎಲ್ಲದಕ್ಕೂ ಜಲಸ್ ಆಗುವ ಹುಡುಗಿ ನೀವಾಗಿದ್ದರೆ ಸ್ವಲ್ಪ ಆಟಿಟ್ಯೂಡ್ ಬದಲಾಯಿಸಿಕೊಳ್ಳಿ. ಜಲಸಿ ಸ್ವಲ್ಪ ಇದ್ದರೆ ಚಂದ. ಅದೇ ಅತಿಯಾದರೆ ವಿಷ.
  • ರೂಡ್ ಮಾತುಕತೆ: ಹೇಳುವ ಮಾತಿಗೆ ಬಣ್ಣಕಟ್ಟಿ ಹೇಳಬೇಕೆಂದಿಲ್ಲ. ಆದರೆ ಹರ್ಟ್ ಆಗದಂತೆ ಹೇಳಬಹುದು, ಅವರಿಗೂ ನೋವಿಲ್ಲ, ಅರ್ಥವಾಗುವಂತೆ ಇದ್ದರೆ ಸಾಕು. ಅದನ್ನು ಬಿಟ್ಟು ರೂಡ್ ಆಗಿ ಮಾತನಾಡಬೇಡಿ.
  • ಸೀಕ್ರೆಟ್ ಸೀಕ್ರೆಟ್: ಹುಡುಗನಿಂದ ಅಥವಾ ಗಂಡನಿಂದ ಹೆಚ್ಚು ಸೀಕ್ರೆಟ್ ಮೇಂಟೇನ್ ಮಾಡಬೇಕು. ಸಣ್ಣ ಸೀಕ್ರೆಟ್‌ಗೂ ಪ್ರೈವೆಸಿಗೂ ವ್ಯತ್ಯಾಸ ಇದೆ. ಆ ಗಡಿ ದಾಟಬೇಡಿ. ಇದು ನಿಮ್ಮ ಸಂಬಂಧವನ್ನೇ ಹಾಳುಮಾಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss