CINE NEWS | ‘ಹುಡುಗರ ನಗ್ನ ಶೂಟ್ ಒಕೆ, ಹುಡುಗಿಯರು ಕ್ಯಾರೆಕ್ಟರ್ ಲೆಸ್ ಅಲ್ವಾ?’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಅಶ್ಲೀಲತೆಯ ಬಗ್ಗೆ ಮಾತನಾಡಿದ್ದಾರೆ. ಹುಡುಗಿಯರು ತುಂಡ ಬಟ್ಟೆ ಹಾಕಿದರೆ ಕ್ಯಾರೆಕ್ಟರ್‌ಲೆಸ್. ಆದರೆ ಹುಡುಗರು ನಗ್ನವಾಗಿ ಫೋಟೊಶೂಟ್ ಮಾಡಿಸಿದರೆ ಏನೂ ತೊಂದರೆ ಇಲ್ಲ ಅಲ್ವಾ ಎಂದು ಶೆರ್ಲಿನ್ ಪ್ರಶ್ನಿಸಿದ್ದಾರೆ.

ರಣ್‌ವೀರ್ ಸಿಂಗ್ ನಗ್ನ ಫೋಟೊಶೂಟ್ ಮಾಡಿಸಿ ಸಾಕಷ್ಟು ಸುದ್ದಿ ಮಾಡಿದ್ದರು. ಈ ಕಾರಣಕ್ಕೆ ಠಾಣೆಯ ಮೆಟ್ಟಿಲು ಕೂಡ ಹತ್ತಬೇಕಾಯ್ತು. ಜನ ಇದನ್ನು ಮರೆತರೂ ಕೆಲ ನಟಿಯರು ಆಗಾಗ ಇದನ್ನು ಉದಾಹರಣೆಯಾಗಿ ಬಳಸುತ್ತಲೇ ಇದ್ದಾರೆ.

ರಣ್‌ವೀರ್ ಫೋಟೊಶೂಟ್ ಹಾಟ್ ಆಗಿದೆ, ಆರ್ಟ್ ರೀತಿ ಇದೆ ಎಂದೆಲ್ಲಾ ಪಾಸಿಟಿವ್ ಕಮೆಂಟ್ ಬರುವಾಗ ಹೆಣ್ಣುಮಕ್ಕಳು ಕಡಿಮೆ ಬಟ್ಟೆ ಹಾಕಿದರೆ ಅವಳು ಕ್ಯಾರೆಕ್ಟರ್ ಇಲ್ಲದವಳು ಎಂದು ಹೇಳೋದು ಯಾಕೆ ಎಂದು ಶೆರ್ಲಿನ್ ಪ್ರಶ್ನಿಸಿದ್ದಾರೆ.

ರಣ್‌ವೀರ್ ನೋಡಿ ಇಷ್ಟಪಟ್ಟು ಎಷ್ಟೋ ಜನ ಅದೇ ರೀತಿ ಫೋಟೊಶೂಟ್ ಮಾಡಿಸಿದರು. ಆದರೆ ನಾನು ಮಾಡಿಸಿದಾಗ ಭಾರೀ ವಿರೋಧ ವ್ಯಕ್ತವಾಯ್ತು, ಅಶ್ಲೀಲ ಮಾತುಗಳನ್ನು ಎದುರಿಸಬೇಕಾಯ್ತು ಎಂದು ನೋವಿನಿಂದ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!