ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶ್ರೀ ಸುತ್ತೂರು ಶಾಖಾಮಠದ ಉದ್ಯಾನದಲ್ಲಿ ಅರಳಿನಿಂತ ಪುಷ್ಪಲೋಕದ ವಿಸ್ಮಯ ಬ್ರಹ್ಮಕಮಲ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಮೈಸೂರು:

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಶಾಖಾಮಠದ ಉದ್ಯಾನದಲ್ಲಿ ಬ್ರಹ್ಮಕಮಲ ಗಿಡಗಳಲ್ಲಿ ಹೂಗಳು ಬಿಟ್ಟು ಶೋಭಿಸುತ್ತಿವೆ.
ಬ್ರಹ್ಮಕಮಲ ಎನ್ನುವುದು ಪುಷ್ಪಲೋಕದ ಅಚ್ಚರಿ. ಸೂರ್ಯನ ಬೆಳಕಿನಲ್ಲಿ ಮೊಗ್ಗಾಗಿ ರಾತ್ರಿಯ ಚಂದ್ರನ ಬೆಳಕಿನಲ್ಲಿ ಪುಷ್ಪಗಳು ಅರಳಿದಾಗ ನಕ್ಷತ್ರಗಳ ಸಮೂಹದಂತೆ ಭಾಸವಾಗುತ್ತವೆ. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುತ್ತಿದ್ದAತೆಯೇ ಬ್ರಹ್ಮಕಮಲ ಗಿಡಗಳಲ್ಲಿ ಹೂಗಳು ಬಿಟ್ಟು ಶೋಭಿಸಲು ಪ್ರಾರಂಭಿಸುತ್ತವೆ. ಇದೇ ಜೂನ್ 9 ರಂದು ರಾತ್ರಿ 11 ಗಂಟೆಯ ಸಮಯದಲ್ಲಿ ಶ್ರೀಮಠದ ಉದ್ಯಾನದಲ್ಲಿರುವ ಒಂದೇ ಬ್ರಹ್ಮಕಮಲದ ಗಿಡದಲ್ಲಿ ಸುಮಾರು 45 ರಿಂದ 50 ಕ್ಕೂ ಹೆಚ್ಚು ಪುಷ್ಪಗಳು ಅರಳಿ ಎಲ್ಲರ ಮನಸೂರೆಗೊಂಡವು. ಇಂತಹ ಅಪರೂಪದ ದೃಶ್ಯವನ್ನು ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಯವರು ವೀಕ್ಷಿಸಿದರು. ಶ್ರೀಮಠದ ಸೇವಾ ಸಿಬ್ಬಂದಿಗಳೆಲ್ಲ ನೋಡಿ ಸಂತೋಷಪಟ್ಟರು. ಶ್ರೀಮಠದಲ್ಲಿ ಇಂತಹ ವಿಶೇಷ ಮತ್ತು ವಿವಿಧ ಜಾತಿಯ ಹೂ-ಹಣ್ಣಿನ ಗಿಡಗಳನ್ನು ಪೋಷಿಸಲಾಗುತ್ತಿದೆ.
ಈ ಗಿಡದ ವೈಜ್ಞಾನಿಕ ಹೆಸರು “ಎಪಿಫಿಲ್ಲಮ್ ಆಕ್ಸಿಪೆಟಲಮ್” (ಇಠಿiಠಿhಥಿಟಟum oxಥಿಠಿeಣಚಿಟum) ಇದು ಕ್ಯಾಕ್ಟೆಸಿ ಕುಟುಂಬಕ್ಕೆ ಸೇರಿದ ಹೂ ಬಿಡುವ ಆರ್ಕಿಡ್ ಕಳ್ಳಿ (ಔಡಿಛಿhiಜ ಛಿಚಿಛಿಣus). ಕನ್ನಡದಲ್ಲಿ ಬ್ರಹ್ಮಕಮಲ ಅಥವಾ ಇರಳುದಾವರೆ ಎಂದು ಪ್ರಸಿದ್ಧಿಯಾಗಿದೆ. ಸುವಾಸನೆಯಿಂದ ಕೂಡಿದ ಬಿಳಿಬಣ್ಣದ ಹೂವುಗಳು ಸರಾಸರಿ 30 ಸೆಂ.ಮೀ ಉದ್ದ 17 ಸೆಂ.ಮೀ ಅಗಲ ಇರುತ್ತವೆ. ಒಂದು ಎಲೆಯಿಂದ ಗಿಡವಾಗಿ ಬೆಳೆಯುತ್ತಾ ತನ್ನ ಮೈ ತುಂಬೆಲ್ಲಾ ಹೂವುಗಳನ್ನು ಬಿಡುತ್ತದೆ. ಬ್ರಹ್ಮಕಮಲದ ಹೂವು ಅರಳುವ ಪ್ರಕ್ರಿಯೆಯೇ ಅತ್ಯಂತ ವಿಸ್ಮಯಕಾರಿಯಾದದ್ದು.
ಹಿಮಾಲಯದ ಶ್ರೇಣಿಗಳಲ್ಲಿ ಈ ಹೂಗಳು ಹೆಚ್ಚಾಗಿ ಕಂಡು ಬರುತ್ತವೆ. ಉತ್ತರಪ್ರದೇಶ ಮತ್ತು ಉತ್ತರಾಖಾಂಡ ರಾಜ್ಯಗಳ ರಾಜ್ಯಪುಷ್ಪವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss