ಭೂಗತ ಲೋಕದ ಮಾಜಿ ಡಾನ್ ಚಕ್ರವರ್ತಿ ಕ್ರಿಸ್ಟೋಫರ್ ಗೆ ಬ್ರೈನ್ ಸ್ಟ್ರೋಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ರಾಜಧಾನಿ ಬೆಂಗಳೂರಿನ ಒಂದಾನೊಂದು ಕಾಲದ ಭೂಗತ ಲೋಕದ ಡಾನ್ ಎಂಬುದಾಗಿಯೇ ಕರೆಸಿಕೊಂಡಿದ್ದ ಬಿಬಿಎಂಪಿಯ ಮಾಜಿ ಸದಸ್ಯ ಚಕ್ರವರ್ತಿ ಕ್ರಿಸ್ಟೋಫರ್ ಗೆ ಬ್ರೈನ್ ಸ್ಟ್ರೋಕ್ ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಿತಿ ಗಂಭೀರ ಎಂಬುದಾಗಿ ತಿಳಿದು ಬಂದಿದೆ.

ಒಂದು ಕಾಲದಲ್ಲಿ ಬೆಂಗಳೂರಿನ ಭೂಗತ ಪಾತಕ ಲೋಕದಲ್ಲಿ ಬಹುದೊಡ್ಡ ಹೆಸರು ಮಾಡಿದ್ದ ಚಕ್ರವರ್ತಿ ಕ್ರಿಸ್ಟೋಫರ್ ಆಲಿಯಾಸ್ ಚಕ್ರೆ ಈ ಬಳಿಕ ಭೂಗತಲೋಕದಿಂದ ಹೊರಬಂದು, ರಾಜಕಾರಣಕ್ಕೆ ಧುಮುಕಿದ್ದರು. ಬಿಬಿಎಂಪಿಯ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.

ಇದೀಗ ಚಕ್ರೆಗೆ ಬ್ರೈನ್ ಸ್ಟ್ರೋಕ್ ಆಗಿರೋದಾಗಿ ತಿಳಿದು ಬಂದಿದೆ. ಅವರನ್ನು ಯಶವಂತಪುರದ ಬಳಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಐಸಿಯುನಲ್ಲಿ ಚಕ್ರವರ್ತಿ ಕ್ರಿಸ್ಟೋಫರ್ ಆಲಿಯಾಸ್ ಚಕ್ರೆ ಚಿಕಿತ್ಸೆ ಮುಂದುವರೆಸಿರುವಂತ ವೈದ್ಯರು, ಸದ್ಯಕ್ಕೆ ಏನೂ ಹೇಳೋದಕ್ಕೆ ಆಗೋದಿಲ್ಲ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರ ಸ್ಥಿತಿ ಚಿಂತಾಜನಕವಾಗಿರೋದಾಗಿ ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!