ಕಾಳಹಸ್ತಿಯಲ್ಲಿ ಬ್ರೆಜಿಲ್ ಭಕ್ತರು: ವಿಶೇಷ ಪೂಜೆ ನೆರವೇರಿಸಿದ ವಿದೇಶಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೂ ಸಂಪ್ರದಾಯದ ಆಚರಣೆಗಳನ್ನು ಆರಾಧಿಸುವ ಬ್ರೆಜಿಲ್ ಭಕ್ತರು ಕಾಳಹಸ್ತಿಗೆ ಭೇಟಿ ನೀಡಿ, ಕಾಳಹಸ್ತೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Srikalahasteeswara temple - Wikipediaಆಂಧ್ರಪ್ರದೇಶದ ಕಾಳಹಸ್ತಿಗೆ ಬ್ರೆಜಿಲ್‌ನ 22 ಭಕ್ತರು ಆಗಮಿಸಿದ್ದು,ರಾಹು-ಕೇತು ಪೂಜೆಗಳನ್ನು ಮಾಡಿಸಿದ್ದಾರೆ. ದೇಗುಲದಲ್ಲಿ ಕುಳಿತು ಹಾಲು, ಪಂಚಾಮೃತ, ಶ್ರೀಗಂಧದೊಂದಿಗೆ ಮೃತ್ಯುಂಜಯ ಅಭಿಷೇಕ ನೆರವೇರಿಸಿದರು.

The tale of Kalahasti - The Hinduಇಲ್ಲಿಗೆ ಭೇಟಿ ನೀಡಿದ್ದು ಅಪಾರ ಖುಷಿ ನೀಡಿದೆ. ದೇವರ ಮೇಲೆ ನಮಗೆ ನಂಬಿಕೆಯಿದೆ, ಇಲ್ಲಿಗೆ ಕಾಲಿಟ್ಟಿದ್ದೇ ನಮ್ಮ ಪುಣ್ಯ ಎಂದು ಬ್ರೆಜಿಲ್ ಪ್ರಜೆಯೊಬ್ಬರು ಹೇಳಿದ್ದಾರೆ. ಬ್ರೆಜಿಲ್‌ನಲ್ಲಿ ಕಾಳಹಸ್ತೇಶ್ವರನನ್ನು ನಂಬುವ ಭಕ್ತರಿದ್ದಾರೆ. ಬಂದವರಿಗೆ ಉತ್ತಮ ಆತಿಥ್ಯ ನೀಡಿದ್ದೇವೆ. ರಾಹು-ಕೇತು ಪೂಜೆಗಳನ್ನು ಶಾಸ್ತ್ರೋತ್ಕವಾಗಿ ಮಾಡಿಸಿದ್ದೇವೆ ಎಂದು ದೇವಾಲಯದ ಸಿಬ್ಬಂದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!