ರಾತ್ರಿಯಿಡೀ ಫಾಸ್ಟಿಂಗ್ ಸ್ಟೇಜ್‌ನಲ್ಲಿ ಇರುವ ನಮ್ಮ ದೇಹಕ್ಕೆ ಬೆಳಗ್ಗೆ ಬೆಸ್ಟ್ ಊಟ, ತಿಂಡಿ ಬೇಕಾಗುತ್ತದೆ. ಬೆಳಗ್ಗೆ ಎದ್ದ ನಂತರ ಮೊದಲು ಹೊಟ್ಟೆಗೆ ಯಾವ ಆಹಾರ ನೀಡುತ್ತೇವೆ ಎನ್ನೋದು ತುಂಬಾನೇ ಮುಖ್ಯ. ಬೆಳಗ್ಗೆಯೇ ಖಾಲಿಹೊಟ್ಟೆಗೆ ಸಿಟ್ರಸ್ ಹಣ್ಣುಗಳು, ಕಾಫಿ, ಟೀ ಕುಡಿಯುವ ಅಭ್ಯಾಸ ಇದ್ದರೆ ಬಂದ್ ಮಾಡಿ..
ಮೊದಲು ಬಿಸಿ ನೀರು, ಬಿಸಿ ಕಷಾಯ, ಬಿಸಿ ನೀರು+ ಜೀರಿಗೆ ಪುಡಿ, ಬಿಸಿ ನೀರು+ ಜೀರಿಗೆ ಪುಡಿ+ತುಪ್ಪ ಇಂತವುಗಳನ್ನು ಸೇವಿಸಿ
ನಂತರ ತಿಂಡಿಗೆ ಇಡ್ಲಿ, ದೋಸೆ, ಓಟ್ಸ್, ಕಿಚಡಿ, ದಾಲ್, ಮೊಟ್ಟೆ, ಚಿಯಾ ಸೀಡ್ಸ್, ಡ್ರೈ ಫ್ರೂಟ್ಸ್, ಚಿಕನ್, ಫಿಶ್, ಮಟನ್ ಸೇವನೆ ಮಾಡಬಹುದು.
ಗ್ರೀಕ್ ಯೋಗರ್ಟ್, ಕಾಫಿ, ಬೆರಿಗಳು, ಕಾಟೇಜ್ ಚೀಸ್, ಹೋಲ್ ವೀಟ್ ಬ್ರೆಡ್ ಟೋಸ್ಟ್, ಹಣ್ಣುಗಳನ್ನು ಕೂಡ ತಿನ್ನಬಹುದು