Friday, July 1, 2022

Latest Posts

BREAKING NEWS | ದೇಶದಲ್ಲಿ ಮತ್ತೆ 9 ಜನರಲ್ಲಿ ಯುಕೆ ಹೈಬ್ರೀಡ್ ಕೊರೋನಾ ಪತ್ತೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಯುಕೆ ಹೈಬ್ರೀಡ್ ಕೊರೋನಾ ದೇಶದಲ್ಲಿ ದಿನೇ ದಿನೇ ಅವರಿಸುತ್ತಿದ್ದು, ಮತ್ತೆ 9 ಜನರರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಭಾರತದಲ್ಲಿ ಸೋಂಕಿತ ಜನರ ಸಂಖ್ಯೆ 38 ಕ್ಕೆ ತಲುಪಿದೆ. ಹೊಸದಾಗಿ ದೆಹಲಿಯಲ್ಲಿ 9 ಪ್ರಕರಣಗಳು ವರದಿಯಾಗಿದೆ.
ನಿಮ್ಹಾನ್ಸ್ ಬೆಂಗಳೂರಿನಲ್ಲಿ 10, ಸಿಸಿಎಂಬಿ ಹೈದರಾಬಾದ್ ನಲ್ಲಿ 3, ಎನ್ ಐವಿ ಪುಣೆಯಲ್ಲಿ 5, ಐಜಿಐಬಿ ದೆಹಲಿಯಲ್ಲಿ 11, ಎನ್ ಸಿಡಿಸಿ ದೆಹಲಿಯಲ್ಲಿ 8 ಹಾಗೂ ಎನ್ ಸಿಡಿಜಿ ಕೋಲ್ಕತ್ತಾದಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ.
ಎನ್ ಸಿಎಸ್ ಇ, ಇನ್ STEM, ಬೆಂಗಳೂರು, CDFD ಹೈದರಾಬಾದ್, ಐಎಲ್ ಎಸ್ ಭುವನೇಶ್ವರ ಮತ್ತು ಎನ್ ಸಿಸಿಎಸ್ ಪುಣೆ ಇದುವರೆಗೆ ಯಾವುದೇ ಯುಕೆ ಹೈಬ್ರೀಡ್ ವೈರಸ್ ಪತ್ತೆಯಾಗಿಲ್ಲ.
ಈಗಾಗಲೇ ಈ ಸೋಂಕಿನ ಕುರಿತು ದೇಶ ಎಚ್ಚರಿಕೆಯಿಂದ ಇದ್ದು, ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಅಧಿಕಾರಿಗಳು ಸಮಗ್ರ ಸಂಪರ್ಕ ಟ್ರ್ಯಾಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಪ್ರತಿ ರಾಜ್ಯಗಳಿಗೆ ಸುಧಾರಿತ ಕಣ್ಗಾವಲು, ನಿಯಂತ್ರಣ, ಪರೀಕ್ಷೆ ಮತ್ತು ಮಾದರಿಗಳನ್ನು INSACOG ಪ್ರಯೋಗಾಲಯಗಳಿಗೆ ಕಳುಹಿಸಲು ನಿಯಮಿತವಾಗಿ ಸಲಹೆ ಗಳನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss