ಹೊಸದಿಗಂತ ವರದಿ, ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಭೂಕಂಪದ ಅನುಭವವಾಗಿದ್ದು, ಜನತೆ ಆತಂಕಕ್ಕೊಳಗಾಗಿದ್ದಾರೆ.
ಕಂಪನದ ಅನುಭವದಿಂದ ಬೆಚ್ಚಿಬಿದ್ದ ಜನತೆ ಮನೆ ಬಿಟ್ಟು ಹೊರಗೆ ಧಾವಿಸಿ ಬಂದಿದ್ದಾರೆ. ಭದ್ರಾವತಿಯಲ್ಲಿ ಭೂಕಂಪದ ಅನುಭವ ಶಬ್ದದ ರಭಸಕ್ಕೆ ಮನೆ ಕಿಟಕಿ, ಬಾಗಿಲುಗಳು ತೆರದುಕೊಂಡಿದ್ದವು. ೫,೬ ಸೆಕೆಂಡ್ಗಳ ಕಾಲ ಭೂಮಿ ನಡುಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಸ್ಕೈ ಕ್ವೇಕ್?
ಆಯನೂರಿನಲ್ಲಿ ಬತ್ತ ಕಾಯಲು ಹೋದ ರೈತರಿಗೆ ಆಕಾಶದಲ್ಲಿ ಶಬ್ದ ಸಹಿತ ಬೆಂಕಿ ಆವರಿಸಿದ ದೃಶ್ಯ ಕಾಣಿಸಿದ್ದು, ಇದು ಅರ್ಥ್ ಕ್ವೇಕ್ ಅಲ್ಲ, ಬದಲಿಗೆ ಇದು ಸ್ಕೈ ಕ್ವೇಕ್ ಎಂದು ಪರಿಣಿತರು ಅಭಿಪ್ರಾಯಿಸಿದ್ದಾರೆ. ಆಕಾಶದಲ್ಲಿ ಬೆಂಕಿ ಉತ್ಪತ್ತಿಯಾದಾಗ ಉಂಟಾದ ಶಬ್ದದ ತೀವ್ರತೆಗೆ ಭೂಮಿ ನಡುಗಿರಬೇಕು ಎಂದು ಅಂದಾಜಿಸಲಾಗಿದೆಯಾದರೂ ಇದು ಖಚಿತಪಟ್ಟಿಲ್ಲ.