BREAKING NEWS | ಪ್ರಧಾನಿ ಭದ್ರತೆಯಲ್ಲಿ ಮತ್ತೆ ಲೋಪ: ಹೆಲಿಕಾಪ್ಟರ್ ಬಳಿ ಹಾರಿ ಬಂದ ಬಲೂನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಂಧ್ರಪ್ರದೇಶದ ವಿಜಯವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಲೋಪವಾಗಿದೆ.

ಈ ಹಿಂದೆ ಪಂಜಾಬ್‌ನಲ್ಲಿ ಭದ್ರತಾ ಲೋಪದ ಬಳಿಕ ಇದೀಗ ಮತ್ತೆ ಆಂಧ್ರಪ್ರದೇಶದಲ್ಲಿ ಇದೇ ರೀತಿ ಘಟನೆ ನಡೆದಿದ್ದು, ಪ್ರಧಾನಿ ಮೋದಿಯ ಹೆಲಿಕಾಪ್ಟರ್ ಸನಿಹದಲ್ಲಿ ಪ್ರತಿಭಟನಕಾರರ ಬಲೂನ್ ಹಾರಿ ಬಂದಿದೆ. ಈ ಮೂಲಕ ಆತಂಕದ ವಾತವಾರಣ ನಿರ್ಮಾಣವಾಗಿತ್ತು.

ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಹಾಗೂ ಮೋದಿ ಹೆಲಿಕಾಪ್ಟರ್ ಮೂಲಕ ತೆರಳು ಮಾರ್ಗದಲ್ಲಿ ಪ್ರತಿಭಟನೆ ವೇಳೆ ಬಲೂನ್ ಹಾರಿಬಿಟ್ಟ ಭದ್ರತಾ ಲೋಪವೆಸಗಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಈ ಬಲೂನ್‌‌ಗಳನ್ನು ಹಾರಿ ಬಿಡಲಾಗಿದೆ. ಹಾರಿಬಿಟ್ಟ ದೊಡ್ಡ ಗಾತ್ರದ ಬಲೂನ್‌ಗಳು ಆಗಸದಲ್ಲಿ ತೇಲಾಡಿದೆ. ಇತ್ತ ಕಾರ್ಯಕ್ರಮದ ಮುಗಿಸಿ ಮೋದಿ ಹೆಲಿಕಾಪ್ಟರ್ ಏರಿ ಪ್ರಯಾಣ ಆರಂಭಿಸಿದರು. ಹೆಲಿಕಾಪ್ಟರ್ ಟೇಕ್ ಆಫ್ ಆಗಿ ಮೇಲಕ್ಕೆ ಹಾರುತ್ತಿದ್ದಂತೆ ಪ್ರತಿಭಟನಾಕಾರರ ಬಲೂನ್ ಅಡ್ಡಬಂದಿದೆ. ಆದರೆ ಪೈಲೈಟ್ ಸಮಯಪ್ರಜ್ಞೆಯಿಂದ ಬಹುದೊಡ್ಡ ಅಪಾಯ ತಪ್ಪಿದೆ.

ಇದು ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ನಡೆದ ಎರಡನೇ ಲೋಪವಾಗಿದೆ.

ಪಂಜಾಬ್ ಭೇಟಿಯಲ್ಲಿ ನಡೆದಿತ್ತು ಭದ್ರತಾ ಲೋಪ
ಪಂಜಾಬ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೈತರ ತಂಡವೊಂದು ಫ್ಲೈಓವರ್‌ವೊಂದರ ಮೇಲೆ ತಡೆಗಟ್ಟಿದ ಆತಂಕಕಾರಿ ಘಟನೆ ಈ ಹಿಂದೆ ನಡೆದಿತ್ತು. . ಪರಿಣಾಮ, ಅತ್ಯಂತ ಬಿಗಿಭದ್ರತೆ ವ್ಯವಸ್ಥೆ ಹೊಂದಿರುವ ಪ್ರಧಾನಿ, ಫ್ಲೈಓವರ್‌ ಮೇಲೇ 20 ನಿಮಿಷಗಳನ್ನು ಅತಂತ್ರರಾಗಿ ಕಳೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!