Sunday, April 11, 2021

Latest Posts

BREAKING NEWS | ನಕ್ಸಲ್​ರಿಂದ ಅಪಹರಿಸಲ್ಪಟ್ಟಿದ್ದ CRPF​ ಯೋಧ ಬಿಡುಗಡೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಛತ್ತೀಸ್​ಗಢದಲ್ಲಿ ಮಾವೋವಾದಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ಸಿಆರ್​​ಪಿಎಫ್​ ಕೋಬ್ರಾ ಪಡೆಯ ಯೋಧ ರಾಕೇಶ್ವರ್ ಸಿಂಗ್ ಮನಹಾಸ್​ನನ್ನು ಮಾವೋವಾದಿಗಳು ಗುರುವಾರ ಬಿಡುಗಡೆ ಮಾಡಿದ್ದಾರೆ.
ಮಾವೋವಾದಿಗಳ ಸೆರೆಯಲ್ಲಿ ಐದು ದಿನಗಳ ಕಾಲ ಇದ್ದ ರಾಕೇಶ್ವರ್ ಸಿಂಗ್ ಬಿಡುಗಡೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ತಾರ್ -ಬಿಜಾಪುರ ದಂಡಕಾರಣ್ಯ ಪ್ರದೇಶದಲ್ಲಿ ನಕ್ಸಲರು, ಯೋಧರೊಂದಿಗೆ ನಡೆದ ಗುಂಡಿನ ಕಾಳಗದ ವೇಳೆ ರಾಕೇಶ್ವರ್ ಸಿಂಗ್ ಅವರನ್ನು ಅಪಹರಿಸಲಾಗಿತ್ತು. ಸ್ಥಳೀಯ ಪತ್ರಕರ್ತರು ಸೇರಿದಂತೆ 11 ಮಂದಿ ಸದಸ್ಯರ ತಂಡ ಮಾವೋವಾದಿಗಳ ಜೊತೆ ನಿರಂತರವಾಗಿ ಮಾತುಕತೆ ನಡೆಸಿ ರಾಕೇಶ್ವರ್ ಸಿಂಗ್ ಅವರನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss