ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಂತ್ರಿ ಡೆವಲಪರ್ಸ್ ನಿರ್ದೇಶಕ, ಉದ್ಯಮಿ ಸುಶೀಲ್ ಮಂತ್ರಿ ವಿರುದ್ಧ ಮನಿ ಲ್ಯಾಂಡರಿಂಗ್ ಆರೋಪದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.
ಅವರನ್ನು ಸಿಐಡಿ ವಿಶೇಷ ತಂಡ ಬಂಧಿಸಿದೆ. ಈ ಪ್ರಕರಣ ಸಂಬಂಧಿಸಿದಂತೆ ಜೂ.25ರಂದು ಸುಶೀಲ್ ಬಂಧಿಸಿ ಇಡಿ ವಿಚಾರಣೆ ನಡೆಸಿತ್ತು. ಬಳಿಕ ಜಾಮೀನಿನ ಮೇಲೆ ಸುಶೀಲ್ ಹೊರಬಂದಿದ್ದರು. ಈಗ ಮತ್ತೆ ಸಿಐಡಿ ತನಿಖಾ ತಂಡ ನಿನ್ನೆ ರಾತ್ರಿ ಸುಶೀಲ್ ಅವರನ್ನು ಅರೆಸ್ಟ್ ಮಾಡಿದೆ.
ಬೆಂಗಳೂರಿನಲ್ಲಿ ಫ್ಲ್ಯಾಟ್ ಖರೀದಿದಾರರಿಂದ ಸಂಗ್ರಹಿಸಿದ ಹಣವನ್ನು ಯೋಜನೆಗಳಿಗೆ ಖರ್ಚು ಮಾಡುವ ಬದಲು ಮಂತ್ರಿಯವರ ವೈಯಕ್ತಿಕ ಬಳಕೆಗಾಗಿ ತಿರುಗಿಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿದುಕೊಂಡಿದೆ. ‘ಅವರು ವಿವಿಧ ಹಣಕಾಸು ಸಂಸ್ಥೆಗಳಿಂದ 5,000 ಕೋಟಿ ರೂ.ಗಳನ್ನು ಎರವಲು ಪಡೆದಿದ್ದಾರೆ ಮತ್ತು ಸುಮಾರು 1,000 ಕೋಟಿ ರೂ.ಗಳು ಬಾಕಿ ಉಳಿದಿವೆ. ಕೆಲವು ಸಾಲವನ್ನು ಎನ್ಪಿಎ ಎಂದು ಕರೆಯಲಾಗಿದೆ’ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.