ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

BREAKING NEWS | ಪ್ರಧಾನಿ ಮನವಿಗೆ ಸ್ಪಂದನೆ: ಕುಂಭಮೇಳ ಮೊಟಕುಗೊಳಿಸಿ ಮಹತ್ವದ ಆದೇಶ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಎರಡನೇ ಅಲೆ ಹೆಚ್ಚುತ್ತಿದ್ದು, ಹೀಗೆ ಕುಂಭಮೇಳ ಕೊರೋನಾ ಹಾಟ್​ಸ್ಪಾಟ್​ ಆಗುತ್ತಿರುವುದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ಈ ಬಾರಿ ಕುಂಭಮೇಳ ಸಾಂಕೇತಿಕವಾಗಿ ನಡೆಯಲಿ ಎಂದು ಹೇಳಿದ್ದರು. ಇದಕ್ಕೆ ಸಾಧುಗಳಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕುಂಭಮೇಳ ಅಂತ್ಯಮಾಡಲಾಗಿದೆ.
ಕುಂಭಮೇಳದಲ್ಲಿ ಅನೇಕರು ಸೋಂಕಿಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಹಿಂದು ಧರ್ಮ ಆಚಾರ್ಯ ಸಭಾದ ಅಧ್ಯಕ್ಷ ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್​ ಅವರೊಂದಿಗೆ ಫೋನ್​ ಮೂಲಕ ಚರ್ಚೆ ನಡೆಸಿದ್ದೇನೆ. ಕುಂಭಮೇಳ ಸಾಂಕೇತಿಕವಾಗಿ ನಡೆಯಲಿ ಎಂದು ಮನವಿಯನ್ನೂ ಮಾಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಇದೀಗ ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿರುವ ಜುನಾ ಅಖಾಡದ ಅವಧೇಶಾನಂದ ಗಿರಿ ಜಿ ಮಹಾರಾಜ್, ಭಾರತದ ಜನರನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆ. ವೈರಸ್​ ಹೆಚ್ಚುತ್ತಿರುವುದರಿಂದ ಎಲ್ಲಾ ದೇವರುಗಳನ್ನು ಇಂದೇ (ಏಪ್ರಿಲ್​ 17) ವಿಸರ್ಜನೆ ಮಾಡಿದ್ದೇವೆ ಎಂದಿದ್ದಾರೆ.
ಏಪ್ರಿಲ್​ 1ರಂದು ಕುಂಭಮೇಳ ಆರಂಭವಾಗಿತ್ತು. ಈ ಸಮಯದಲ್ಲೇ ವೈರಸ್​ ಮಿತಿ ಮೀರಿ ಹರಡಿತ್ತು. ಕುಂಭಮೇಳದಿಂದ ವೈರಸ್​ ಹೆಚ್ಚುವ ಭೀತಿ ಕಾಡಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss