BREAKING NEWS: ಬ್ರಿಟನ್ ಪ್ರಧಾನಿ ಹುದ್ದೆಗೆ ರಿಷಿ ಸುನಕ್ ಇನ್ನಷ್ಟು ಹತ್ತಿರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೋರಿಸ್ ಜಾನ್ಸನ್​​​ ಅವರ ರಾಜೀನಾಮೆಯಿಂದ ತೆರವಾಗಿರುವ ಯುನೈಟೆಡ್​​ ಕಿಂಗ್​ಡಮ್​ ಪ್ರಧಾನಿ ಹುದ್ದೆಗೆ ಈಗಾಗಲೇ ಮತದಾನ ಆರಂಭಗೊಂಡಿದೆ. ಮೊದಲ ಸುತ್ತಿನಲ್ಲಿ ಮುನ್ನಡೆ ಪಡೆದುಕೊಂಡಿದ್ದ ರಿಷಿ ಸುನಕ್​ ಇದೀಗ ಎರಡನೇ ಸುತ್ತಿನ ಮತದಾನದಲ್ಲೂ ಹೆಚ್ಚು ಮತ ಪಡೆದುಕೊಂಡಿದ್ದಾರೆ.
ನಿನ್ನೆ 1 ನೇ ಸುತ್ತಿನಲ್ಲಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಇಂದು ಎರಡನೇ ಸುತ್ತಿನಲ್ಲಿಯೂ ರಿಷಿ ಸುನಕ್ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ಅಭ್ಯರ್ಥಿಗಳ ಪೈಕಿ ಒಬ್ಬರು ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ.
ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯರಾಗಿರುವ ರಿಷಿ ಸುನಕ್ ಪ್ರಧಾನಿ ಹುದ್ದೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಬೋರಿಸ್ ಜಾನ್ಸನ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಹತ್ವದ ಹಣಕಾಸು ಖಾತೆ ನಿರ್ವಹಿಸಿದ್ದರು. ಧಾನಿ ಹುದ್ದೆಗೆ ನಡೆಯುತ್ತಿರುವ ಪೈಪೋಟಿಯಲ್ಲಿ ರಿಷಿ ಸುನಕ್ ಹತ್ತಿರವಾಗಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಸುನಕ್ 101 ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಮೊರ್ಡಾಂಟ್ 83 ಮತ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 64 ಮತಗಳನ್ನು ಪಡೆದರು. ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ಮನ್ 27 ಮತಗಳೊಂದಿಗೆ ಹೊರಹಾಕಲ್ಪಟ್ಟರು. ಶಾಸಕ ಟಾಮ್ ತುಗೆಂಧತ್ 32 ಮತಗಳನ್ನು ಪಡೆದರೆ, ಕೆಮಿ ಬಡೆನೋಚ್ 49 ಮತಗಳನ್ನು ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!