Tuesday, March 28, 2023

Latest Posts

ಅಕ್ಷಯ್ ಕುಮಾರ್ ಜೊತೆಗಿನ ಬ್ರೇಕಪ್‌: ಮೌನ ಮುರಿದ ರವೀನಾ ಟಂಡನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ 90ರ ದಶಕದಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ಜೋಡಿ ಅಂದರೆ ಅಕ್ಷಯ್ ಕುಮಾರ್- ರವೀನಾ ಟಂಡನ್. ತೆರೆಯ ಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡ ಇಬ್ಬರೂ ಪ್ರೀತಿಸುತ್ತಿದ್ದರು. ಆದ್ರೆ ಇಬ್ಬರ ಲವ್ವಿ-ಡವ್ವಿ ಮದುವೆ ಹಂತದವೆರೆಗೂ ಬಂದು ಮುರಿದು ಬಿದ್ದಿತ್ತು.

ಇದೀಗ ಈ ಬಗ್ಗೆ ನಟಿ ರವೀನಾ ಮೌನ ಮುರಿದ್ದಾರೆ. ಎಲ್ಲರೂ ಮುಂದೆ ಸಾಗಿದ್ದಾರೆ ಆದರೆ ಜನರು ಮಾತ್ರ ಇನ್ನೂ ಮುರಿದ ನಿಶ್ಚಿತಾರ್ಥದ (Engagement) ಬಗ್ಗೆಯೇ ಯಾಕೆ ಮಾತನಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಆ ಸಮಯದಲ್ಲಿ ಬ್ರೇಕಪ್‌ನಿಂದ ಹೊರಬರಲು ತನಗೆ ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ. ಒಮ್ಮೆ ನಾನು ಅವರ ಜೀವನದಿಂದ ಹೊರಬಂದ ಬಳಿಕ ಮತ್ತೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಅವರು ಕೂಡ ಆಗಲೇ ಬೇರೆ ಯುವತಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ಹಾಗಿದ್ದ ಮೇಲೆ ಅಸೂಯೆ ಎಲ್ಲಿಂದ ಬರುತ್ತೆ ಎಂದು ರವೀನಾ ಮಾತನಾಡಿದ್ದಾರೆ.

ನಾವು `ಮೊಹ್ರಾ’ ಸಮಯದಲ್ಲಿ ಹಿಟ್ ಪೇರ್ ಆಗಿದ್ದೆವು. ಈಗಲೂ ನಾವು ಭೇಟಿಯಾಗುತ್ತೇವೆ. ಮಾತನಾಡುತ್ತೇವೆ. ನಾವು ಮುಂದೆ ಸಾಗಿದ್ದೇವೆ. ಅನೇಕರು ವಿಚ್ಛೇದನ ಪಡೆದಿದ್ದಾರೆ ಅವರೂ ಮೂವ್ ಆನ್ ಆಗಿದ್ದಾರೆ. ಅದೇನು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.

1994ರಲ್ಲಿ `ಮೊಹ್ರಾ’ ಎಂಬ ಸಿನಿಮಾದಲ್ಲಿ ಅಕ್ಷಯ್ ಕುಮಾರ್ (Akshay Kumar) ಮತ್ತು ರವೀನಾ ಜೋಡಿಯಾಗಿ ನಟಿಸಿದ್ದರು. ಚಿತ್ರದಲ್ಲಿ `ಟಿಪ್ ಟಿಪ್ ಬರ್ಸಾ ಪಾನಿ’ ಹಾಡು ಅಂದು ಪಡ್ಡೆಹುಡುಗರ ನಿದ್ದೆಗೆಡಿಸಿತ್ತು. ಈ ಜೋಡಿಯ ಕೆಮಿಸ್ಟ್ರಿಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದರು. ತೆರೆಹಿಂದೆ ಸತಿ-ಪತಿಗಳಾಗಿ ಹೊಸ ಬಾಳಿಗೆ ಕಾಲಿಡಲು ಎಲ್ಲಾ ತಯಾರಿಯಾಗಿತ್ತು. ಹಲವು ಡೇಟಿಂಗ್‌ಗೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಈ ಸಂಬಂಧಕ್ಕೆ ಬ್ರೇಕ್ ಬಿದ್ದಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!