spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸ್ತನ ಕ್ಯಾನ್ಸರ್ ಪ್ರಕರಣ ಏರಿಕೆ: ದೇಶದಲ್ಲೇ ರಾಜಧಾನಿ ಬೆಂಗಳೂರಿಗೆ ಎರಡನೇ ಸ್ಥಾನ

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಯುವತಿಯರನ್ನು ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ಸ್ತನ ಕ್ಯಾನ್ಸರ್.
ರಾಜ್ಯದಲ್ಲಿ ವಾರ್ಷಿಕ 9 ಸಾವಿರಕ್ಕೂ ಹೆಚ್ಚು ಸ್ತನ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ.
ಸ್ತನ ಕ್ಯಾನ್ಸರ್ ಪ್ರಕರಣದ ಏರಿಕೆಯಲ್ಲಿ ರಾಜಧಾನಿ ಬೆಂಗಳೂರು ಇಡೀ ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. ಚೆನ್ನೈ ಮೊದಲ ಸ್ಥಾನ ಪಡೆದಿದೆ.

ಕಿದ್ವೈ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಕುರಿತು ಅಧ್ಯಯನ ನಡೆಸಿದ್ದು, ಯುವತಿಯರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆ ಕಾಣಿಸುತ್ತಿರುವುದಕ್ಕೆ ಮದ್ಯಪಾನ ಹಾಗೂ ಧೂಮಪಾನ ಪ್ರಮುಖ ಕಾರಣ ಎನ್ನುವ ಅಂಶ ಬೆಳಕಿಗೆ ಬಂದಿದೆ.
ವಯಸ್ಸಾದ ನಂತರ ಮದುವೆಯಾಗುವುದು, ಮಾರ್ಡನ್ ಜೀವನ ಶೈಲಿ, ಪಾಶ್ಚಿಮಾತ್ಯ ಡಯಟ್ ಪ್ಲಾನ್‌ಗಳು ಸ್ತನ ಕ್ಯಾನ್ಸರ್‌ಗೆ ಕಾರಣವಾಗಿವೆ.

ರಾಜ್ಯದಲ್ಲಿ ಪ್ರತಿ ವರ್ಷ 9-10 ಸಾವಿರ ಯುವತಿಯರಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದು, ಪ್ರಸ್ತುತ 26-30 ಸಾವಿರ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೆಂಗಳೂರಿನಲ್ಲಿ 1,668 ಮಂದಿ ಇದೀಗ ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ 2008 ರಲ್ಲಿ ಪ್ರತಿ ಒಂದು ಲಕ್ಷ ಮಹಿಳೆಯರಲ್ಲಿ ಒಟ್ಟು 34  ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಾಧಿಸಿತ್ತು. ಇದೀಗ ಒಂದು ಲಕ್ಷ ಮಹಿಳೆಯರಲ್ಲಿ 40 ಮಂದಿಗೆ ಕ್ಯಾನ್ಸರ್ ಬಾಧಿಸುತ್ತಿದೆ.

ಸ್ತನ ಕ್ಯಾನ್ಸರ್‌ಗೆ ಕಾರಣಗಳೇನು?
ಅತಿಯಾದ ಮದ್ಯಪಾನ
ತೂಕ ಏರಿಕೆ
ಆಧುನಿಕ ಜೀವನಶೈಲಿ
ಸ್ತನ್ಯಪಾನ ಮಾಡಿಸದಿರುವುದು
ಅತಿ ಬೇಗನೇ ಋತುಸ್ರಾವ
ಹಾರ್ಮೋನು ಬದಲಾವಣೆ ಚಿಕಿತ್ಸೆ
ತಡವಾದ ಋತುಬಂಧ
ಗರ್ಭನಿರೋಧಕ ಬಳಕೆ

ಸ್ತನ ಕ್ಯಾನ್ಸರ್ ಬಾರದಂತೆ ತಡೆಗಟ್ಟುವುದು ಹೇಗೆ?
ಸರಿಯಾದ ತೂಕ ನಿರ್ವಹಣೆ
ದೈಹಿಕವಾಗಿ ಸಕ್ರಿಯರಾಗಿರಿ
ಹಣ್ಣು ತರಕಾರಿ ತಿನ್ನುವುದನ್ನು ರೂಢಿಸಿ
ಮದ್ಯಪಾನ, ಧೂಮಪಾನ ನಿಲ್ಲಿಸಿ
35 ವರ್ಷದ ನಂತರ ಗರ್ಭನಿರೋಧಕ ಬಳಕೆ ಬೇಡ
ಕನಿಷ್ಟ ಎರಡು ವರ್ಷದವರೆಗೆ ಸ್ತನಪಾನ ಮಾಡಿಸಿ

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss