ಲಂಚದ ಬೇಡಿಕೆ: ಲೋಕಾಯುಕ್ತರಿಂದ ನಾರಾಯಣಪುರ ಪಿಡಿಒ ಬಂಧನ

ಹೊಸದಿಗಂತ ವರದಿ,ಹಾವೇರಿ:

ಅತಿವೃಷ್ಟಿಯಿಂದ ಮನೆ ಹಾನಿಯಾದ ಫಲಾನುಭವಿಗೆ ೫೦ ಸಾವಿರರೂ ಲಂಚದ ಬೇಡಿಕೆ ಇಟ್ಟ ನಾರಾಯಣಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಈರಣ್ಣ ಬಾಳಪ್ಪ ಗಾಣಿಗಿ ಎಂಬಾತನನ್ನು ಹಾವೇರಿ ಲೋಕಾಯುಕ್ತ ಪೊಲೀಸ್‌ರು ಬಂಧಿಸಿದ್ದಾರೆ.
ಪ್ರಸಕ್ತ ಸೆಪ್ಟಂಬರ್ ತಿಂಗಳಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಮನೆ ನಿರ್ಮಾಣಕ್ಕೆ ಪರಿಹಾರ ಹಣ ನೀಡಲು ಫಲಾನುಭವಿ ಸಂಗಪ್ಪ ವೀರಭದ್ರಪ್ಪ ಕಿವುಡನವರ ಎಂಬಾತನಿಗೆ ೫೦ ಸಾವಿರರೂ ಬೇಡಿಕೆ ಇಟ್ಟು, ಮುಂಗಡವಾಗಿ ಫಲಾನುಭವಿಯಿಂದ ಶಿಗ್ಗಾಂವ ನಗರದ ತಮ್ಮ ಮನೆಯಲ್ಲಿ ಪಿಡಿಒ ಈರಪ್ಪ ಬಾಳಪ್ಪ ಗಾಣಿಗಿ ಅವರು ೨೦ ಸಾವಿರರೂ ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ ಅವರ ನೇತೃತ್ವದ ತಂಡ ಬಂಧಿಸಿದೆ.
ಬೆಂಗಳೂರಿನ ಲೋಕಾಯುಕ್ತ ಎಡಿಜಿಪಿ ಹಾಗೂ ದಾವಣಗೆರೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಡಿಎಸ್‌ಪಿ ಚಂದ್ರಶೇಖರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಹಾವೇರಿ ಲೋಕಾಯುಕ್ತದ ತನಿಖಾಧಿಕಾರಿಗಳಾದ ಯು.ಎಸ್.ಅವಟಿ, ಮಂಜುನಾಥ್ ನಡುವಿನಮನಿ, ಸಿಬ್ಬಂದಿಗಳಾದ ಸಿ.ಎಂ.ಬಾರ್ಕಿ, ಎಸ್.ಸಿ.ಮುಗದೂರ, ಎಂ.ಕೆ.ನದಾಫ್, ಡಿ.ಎಸ್.ಬಿಲ್ಲರ್, ಆನಂದ ತಳಕಲ್, ಬಿ.ಎಸ್.ಸಂಕಣ್ಣನವರ, ಆನಂದ ಶೆಟ್ಟರ ಅವರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!