ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಧುವಿಗೆ ಕೊರೋನಾ ಪಾಸಿಟಿವ್: ಮದುವೆಯಲ್ಲಿ ಭಾಗಿಯಾದವರೆಲ್ಲರಿಗೂ ಆತಂಕ

ಹೊಸದಿಗಂತ ವರದಿ, ಕೊಪ್ಪಳ:

ಅತ್ತ ವಿಜಯಪುರದಲ್ಲಿ ಮದುವೆಯಾಗುತ್ತಿದ್ದಂತೆ ಇತ್ತ ಆಕೆಯ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರಿಂದ ಮದುವೆಯಲ್ಲಿ ಭಾಗಿಯಾದವರಿಗೆ ಕೊರೋನಾ ಭಾದಿಸುವ ಆತಂಕ ಹೆಚ್ಚಾಗಿದೆ.
ಮದುವೆ ತಯಾರಿಯ ಬರದಲ್ಲಿ ಕೊಪ್ಪಳದಿಂದ ವಿಜಯಪುರಕ್ಕೆ ಪ್ರಯಾಣ ಮಾಡಿದ ವಧುವಿಕೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮೂರು ದಿನಗಳ ಹಿಂದೆ ಯುವತಿ ಕೊರೋನಾ
ಟೆಸ್ಟ್ಗೆ ಒಳಗಾಗಿದ್ದಳು. ಕೊರೋನಾ ವರದಿ ಬರುವಷ್ಟರಲ್ಲಿ ಆಕೆಯ ಮದುವೆ ಸರಾಗವಾಗಿ ನಡೆದು ಹೋಗಿದೆ.ಮದುವೆಯ ನಂತರ  ಆಕೆಗೆ ಕೊರೋನಾ ಕೊರೋನಾ ಪಾಸಿಟಿವ್ ಎಂದು ತಿಳದುಬಂದಿದ್ದು, ಇದರಿಂದ ಮದುಮಗ ಸೇರಿದಂತೆ ಮದುವೆಯಲ್ಲಿ ಭಾಗಿಯಾದವರು ಆತಂಕಕ್ಕೀಡಾಗಿದ್ದಾರೆ .
ಮದುಮಗಳು ಈಗ ವಿಜಯಪುರದಿಂದ ಕಿನ್ನಾಳಕ್ಕೆ ಆಗಮಿಸುತ್ತಿದ್ದು, ಬಳಿಕವಷ್ಟೇ ಚಿಕಿತ್ಸೆಯನ್ನು ಪಡೆಯಲಿದ್ದಾರೆ . ಮದುವೆಯಲ್ಲಿ ಭಾಗಿಯಾದವರೆಲ್ಲರೂ ಪ್ರಾಥಮಿಕ ಸಂಪರ್ಕದವರಾಗಲಿದ್ದು, ಕ್ವಾರಂಟೈನ್ ನಲ್ಲಿ ಇರಬೇಕಿದೆ.
ವಧುವಿನ ಮನೆಯ ಸುತ್ತ ಮುತ್ತ ಸೇರಿದಂತೆ ಗ್ರಾಮವನ್ನು ಸಾನಿಟೈಸ್ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss