ಉದ್ಘಾಟನೆ ದಿನವೇ ಕುಸಿದ ಬ್ರಿಡ್ಜ್: ಕಾಲುವೆಗೆ ಬಿದ್ದ 20 ಮಂದಿ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಕ್ಸಿಕೋದಲ್ಲಿ ಹೊಸದಾಗಿ ನಿರ್ಮಿಸಲಾದ ಸೇತುವೆಯೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಜನ ಸಂಚಾರಕ್ಕೆಂದು ಸೇತುವೆ ಉದ್ಘಾಟನೆ ಮಾಡಿದ ಕೆಲ ಕ್ಷಣಗಳಲ್ಲೇ ಮುರಿದು ಬಿದ್ದಿರುವುದು ಇದೀಗ ಟೀಕೆಗೆ ಗುರಿಯಾಗಿದೆ. ಕುರ್ನವಾಕ ಪ್ರದೇಶದಲ್ಲಿ ಮೇಯರ್ ಜೋಸಿ ಲೂಯಿಸ್ ವೂರಿಯೊಸ್ಟಿಗುಯಿ ಸೇತುವೆ ಉದ್ಘಾಟನೆ ಮಾಡಿದ್ದಾರೆ. ಬಳಿಕ ಅದರ ಮೇಲೆ ಮೇಯರ್‌ ದಂಪತಿ, ಪತ್ರಕರ್ತರು ಮತ್ತು ಪ್ರವಾಸಿಗರು ನಡೆದುಕೊಂಡು ಬರುವ ವೇಳೆಯೇ ಕುಸಿದಿದೆ.

ಸೇತುವೆ ಮೇಲಿದ್ದ ಸುಮಾರು 20 ಮಂದಿ ಕೆಳಗಿದ್ದ ಕಾಲುವೆಗೆ ಬಿದ್ದಿದ್ದಾರೆ. ಅವರಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಳಗೆ ಬಿದ್ದವರಲ್ಲಿ ಮೇಯರ್ ಪತ್ನಿಯೂ ಸೇರಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!