ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..
ಹೊಸ ದಿಗಂತ ವರದಿ, ಬೀದರ್ :
ಕೋವಿಡ್-19 ನಿಂದ ಗುಣಮುಖರಾದ ರೋಗಿಗಳಿಗೆ ಹಾಗೂ ಇನ್ನೀತರ ಶ್ವಾಸಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಾದ ದಮ್ಮು, ಅಸ್ತಮಾದಿಂದ ಬಳಲುವ ಸಾಮಾನ್ಯ ನಾಗರಿಕರಿಗೆ ಉಪಯುಕ್ತವಾಗಿರುವ ಪಿಎಫ್ಟಿ ಯಂತ್ರವು ಇದೀಗ ಬೀದರ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗಿದೆ.
ಜಿಲ್ಲಾಧಿಕಾರಿಗಳಾದ ರಾಮಚಂದ್ರನ್.ಆರ್ ಅವರು ಆಗಸ್ಟ್ 28ರಂದು ತಾವೇ ಖುದ್ದು ಬ್ರಿಮ್ಸ್ ಆಸ್ಪತ್ರೆಗೆ ತೆರಳಿ, ಅಲ್ಲಿ ಪ್ರಥಮ ಪಿ.ಎಫ್.ಟಿ ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಮೂಲಕ ತಮ್ಮ ಶ್ವಾಸಕೋಶದ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಿಕೊಂಡರು. ಈ ಮೂಲಕ ಪಿಎಫ್ಟಿ ಯಂತ್ರಕ್ಕೆ ಚಾಲನೆ ನೀಡಿದರು.
ಎದೆ ಮತ್ತು ಕ್ಷಯರೋಗ ವಿಭಾಗದ ಮುಖ್ಯಸ್ಥರಾದ ಡಾ.ಯೋಗೇಶ್ ಕಾಮಶೆಟ್ಟೆ ಅವರು ಜಿಲ್ಲಾಧಿಕಾರಿಗಳ ಎದೆ ಪರೀಕ್ಷೆಯನ್ನು ನಡೆಸಿದರು.
ಪಿ.ಎಫ್.ಟಿ ಉಪಕರಣವನ್ನು ಸಂಸ್ಥೆಗೆ ನೀಡಿದ ಜಿಲ್ಲಾಧಿಕಾರಿಗಳಿಗೆ ಬ್ರಿಮ್ಸ್ ಆಸ್ಪತ್ರೆಯ ವೈದ್ಯರುಗಳು ಇದೆ ವೇಳೆಯಲ್ಲಿ ಅಭಿನಂದನೆಗಳ ಸಲ್ಲಿಸಿದರು.
ಬ್ರಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಚಂದ್ರಕಾಂತ ಚಿಲ್ಲರ್ಗಿ, ವಿಭಾಗದ ತಜ್ಞ ವೈದ್ಯರಾದ ಡಾ.ಸತೀಸ್ ಮುಡಬಿ, ವೈದ್ಯಕೀಯ ಅಧೀಕ್ಷಕರಾದ ಡಾ.ಶಿವಕುಮಾರ ಶೆಟಕಾರ್ ಹಾಗೂ ಇನ್ನೀತರರು ಉಪಸ್ಥಿತರಿದ್ದರು.