ಉಕ್ರೇನ್‌ಗೆ 1.3 ಬಿಲಿಯನ್‌ ಪೌಂಡ್‌ ಆರ್ಥಿಕ ನೆರವು ಘೋಷಿಸಿದ ಬ್ರಿಟನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್‌ಗೆ ಹೆಚ್ಚಿನ ಮಿಲಿಟರಿ ನೆರವು ನೀಡಲು ಸಿದ್ಧವಾಗಿದೆ ಎಂದು ಬ್ರಿಟನ್‌ ಸ್ಪಷ್ಟಪಡಿಸಿದ ಬೆನ್ನಲ್ಲೇ ಉಕ್ರೇನ್ ಗೆ 1.3 ಬಿಲಿಯನ್ ಪೌಂಡ್ (ಅಂದಾಜು 12,344 ಕೋಟಿ ರೂ.) ಆರ್ಥಿಕ ನೆರವು ನೀಡುವುದಾಗಿ ಬ್ರಿಟನ್ ಘೋಷಿಸಿದೆ. ಭಾನುವಾರ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರೊಂದಿಗೆ ಏಳು ಯುರೋಪಿಯನ್ ರಾಷ್ಟ್ರಗಳ ಮುಖ್ಯಸ್ಥರು ವೀಡಿಯೊ ಕಾನ್ಫರೆನ್ಸ್‌ ಸಭೆಯಲ್ಲಿಯೇ ಬ್ರಿಟನ್‌ ಆರ್ಥಿಕ ಸಹಾಯವನ್ನು ಘೋಷಿಸಿದೆ.

ಇಂದು ಘೋಷಿಸಲಾದ ಆರ್ಥಿಕ ನೆರವು ಈ ಹಿಂದೆ ಘೋಷಿಸಿದ್ದಕ್ಕಿಂತ ದುಪ್ಪಟ್ಟು ಮತ್ತು ಇರಾಕ್ ಮತ್ತು ಅಫ್ಘಾನಿಸ್ತಾನ ಬಿಕ್ಕಟ್ಟಿನ ಸಂದರ್ಭದಲ್ಲಿ ಇದುವರೆಗೆ ಖರ್ಚು ಮಾಡಿದ್ದಕ್ಕಿಂತ ಹೆಚ್ಚು ಎನ್ನಲಾಗಿದೆ. ಪುಟಿನ್ ಅವರ ಕ್ರೂರ ದಾಳಿಯು ಉಕ್ರೇನ್‌ನಲ್ಲಿ ಹೇಳಲಾಗದ ವಿನಾಶಕ್ಕೆ ಕಾರಣವಾಗಿದೆ. ಇದು ಯುರೋಪಿನಾದ್ಯಂತ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯಾಗಿದೆ ಎಂದು ವಾಷಿಂಗ್ಟನ್ ಬ್ಯೂರೋದ ಕ್ರಿಶ್ಚಿಯನ್ ಸೈನ್ಸ್ ಮಾನಿಟರ್‌ನ  ಮುಖ್ಯಸ್ಥ ಜಾನ್ಸನ್ ಹೇಳಿದರು. ಪ್ರಸ್ತುತ ಘೋಷಿಸಲಾದ ಹಣಕಾಸಿನ ನೆರವನ್ನು ಉಕ್ರೇನ್‌ನಲ್ಲಿರುವ ಜನರಿಗೆ ಆಹಾರ ಮತ್ತು ವೈದ್ಯಕೀಯ ನೆರವು ಒದಗಿಸಲು ಹಾಗೂ ತುರ್ತು ಭದ್ರತೆಗಾಗಿ ಬಳಸಲಾಗುತ್ತದೆ.

ಉಕ್ರೇನ್‌ಗೆ ಘೋಷಿಸಲಾದ ಹೆಚ್ಚುವರಿ ಹಣಕಾಸಿನ ನೆರವನ್ನು, ತುರ್ತು ಪರಿಸ್ಥಿತಿಗಳಿಗಾಗಿ ಯುಕೆ ಸರ್ಕಾರವು ಬಳಸುವ ಮೀಸಲು ನಿಧಿಯ ಮೂಲಕ ನೀಡಲಾಗುತ್ತದೆ ಎಂದು ಬ್ರಿಟನ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!