ಬ್ರಿಟನ್ ರಾಜವಂಶದ ಮಹತ್ವದ ನಿರ್ಧಾರ: ರಾಣಿ ಕ್ಯಾಮಿಲ್ಲಾ ಪಟ್ಟಾಭಿಷೇಕಕ್ಕೆ ಕೊಹಿನೂರ್ ವಜ್ರವಿಲ್ಲದ ಕಿರೀಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇನ್ನು ಮೂರು ತಿಂಗಳಲ್ಲಿ ಬ್ರಿಟನ್ ದೊರೆ ಚಾರ್ಲ್ಸ್‌ III ಪಟ್ಟಾಭಿಷೇಕ ನಡೆಯಲಿದೆ. ಈ ಸಮಯದಲ್ಲಿ ರಾಜವಂಶವು ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದೆ. ಪಟ್ಟಾಭಿಷೇಕದಲ್ಲಿ ಕೊಹಿನೂರ್ ವಜ್ರವನ್ನು ಬಳಸದಂತೆ ಪ್ರಸ್ತಾಪಿಸಲಾಗಿದೆ. ವಸಾಹತುಶಾಹಿ ಆಡಳಿತದ ಸಂಕೇತವಾಗಿ ಬ್ರಿಟಿಷ್ ರಾಜಮನೆತನವು ಹೊಂದಿರುವ ವಿವಾದಾತ್ಮಕ ವಜ್ರ ಕೊಹಿನೂರ್ ಕಿರೀಟವನ್ನು ಧರಿಸದೆ ತನ್ನ ಪತಿ ಚಾರ್ಲ್ಸ್ III ರ ಪಟ್ಟಾಭಿಷೇಕದಲ್ಲಿ ಪಾಲ್ಗೊಳ್ಳಲು ಬ್ರಿಟನ್ ರಾಣಿ ಕ್ಯಾಮಿಲ್ಲಾ ನಿರ್ಧರಿಸಿದ್ದಾರೆ. ಬಕಿಂಗ್ ಹೋಮ್ ಪ್ಯಾಲೇಸ್‌ನ ಮೂಲಗಳು ಇದನ್ನು ಪ್ರಕಟಿಸಿವೆ.

ವಜ್ರವನ್ನು ಮೂಲತಃ ಕ್ವೀನ್ ಕಾನ್ಸಾರ್ಟ್ ಕ್ಯಾಮಿಲ್ಲಾಳ ಪಟ್ಟಾಭಿಷೇಕದಲ್ಲಿ ಬಳಸಲು ಉದ್ದೇಶಿಸಲಾಗಿತ್ತು, ಆದರೆ ಈ ಕಲ್ಪನೆಯನ್ನು ಅಂತಿಮವಾಗಿ ಕೈಬಿಡಲಾಯಿತು. ಈ ಕಿರೀಟದ ಬದಲಾಗಿ ಕ್ಯಾಮೆಲ್ಲಾ ಕ್ವೀನ್ ಮೇರಿ ಧರಿಸಿರುವ ಮತ್ತೊಂದು ಕಿರೀಟವನ್ನು ಧರಿಸಲಿದ್ದಾರೆ. ಈಗಾಗಲೇ ಕ್ಯಾಮಿಲ್ಲಾಗೆ ಸರಿಹೊಂದುವಂತೆ ಕಿರೀಟದ ಗಾತ್ರದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ಕಿರೀಟದಲ್ಲಿ ಬ್ರಿಟನ್ ರಾಣಿ ಎಲಿಜಬೆತ್ II ಅವರಿಗೆ ಸೇರಿದ ಆಭರಣಗಳನ್ನು ಹೊದಿಸಲಾಗುತ್ತದೆ. ಈ ವರ್ಷ, ಬ್ರಿಟಿಷ್ ರಾಜ ಚಾರ್ಲ್ಸ್ III ರ ಪಟ್ಟಾಭಿಷೇಕವು ಮೇ 6 ರಂದು ನಡೆಯಲಿದೆ.

ಪಟ್ಟಾಭಿಷೇಕ ಸಮಾರಂಭವು ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ. ಅದೇ ಸಮಯದಲ್ಲಿ, ಕ್ವೀನ್ ಕಾನ್ಸಾರ್ಟ್ ಕ್ಯಾಮಿಲ್ಲಾ ಕೂಡ ಪಟ್ಟಾಭಿಷೇಕ ಸಮಾರಂಭವನ್ನು ನಡೆಸಲಿದ್ದಾರೆ. ಏಳು ದಶಕಗಳ ಕಾಲ ಬ್ರಿಟನ್ನನ್ನು ಆಳಿದ ರಾಣಿ ಎಲಿಜಬೆತ್ II, ಸಾಯುವವರೆಗೂ ತನ್ನ ಕಿರೀಟದಲ್ಲಿ ಕೊಹಿನೂರ್ ವಜ್ರವನ್ನು ಧರಿಸುವುದನ್ನು ಮುಂದುವರೆಸಿದಳು. ರಾಣಿ ಕ್ಯಾಮಿಲ್ಲಾ ಸೂಕ್ಷ್ಮ ರಾಜತಾಂತ್ರಿಕ ಸಮಸ್ಯೆಗಳಿಂದಾಗಿ ಕೊಹಿನೂರ್‌ನಿಂದ ದೂರವಿರಲು ನಿರ್ಧರಿಸಿದ್ದಾರೆ.

ಬ್ರಿಟನ್ ರಾಜನ ಪಟ್ಟಾಭಿಷೇಕದಲ್ಲಿ ಕೊಹಿನೂರ್ ವಜ್ರವನ್ನು ಬಳಸಿದರೆ ಭಾರತದೊಂದಿಗೆ ರಾಜತಾಂತ್ರಿಕ ಸಮಸ್ಯೆಗಳು ಎದುರಾಗಬಹುದು ಎಂಬ ಆತಂಕ ಈಗಾಗಲೇ ಬ್ರಿಟನ್ ನಲ್ಲಿ ವ್ಯಕ್ತವಾಗಿದೆ. ಕೊಹಿನೂರ್ ಅನ್ನು ಹಿಂದಿರುಗಿಸುವಂತೆ ಭಾರತ ಸರ್ಕಾರ ಬ್ರಿಟನ್ನಿಗೆ ಹಲವು ಬಾರಿ ಕೇಳಿದೆ. ಈ ಬೆಳವಣಿಗೆಗಳಿಂದ ರಾಜಮನೆತನ ಈ ನಿರ್ಧಾರ ಕೈಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!