ಸಬರಮತಿ ಆಶ್ರಮದಲ್ಲಿ ಚರಕ ತಿರುಗಿಸಿ ಖುಷಿಪಟ್ಟ ಬ್ರಿಟನ್ ಪ್ರಧಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈಗಾಗಲೇ ಗುಜರಾತ್​ನ ಅಹಮದಾಬಾದ್​​ಗೆ ಬಂದಿಳಿದಿದ್ದು, ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಹಾತ್ಮ ಗಾಂಧಿ ಅವರ ಸಬರಮತಿ ಆಶ್ರಮದಲ್ಲಿ ಸಾಂಪ್ರದಾಯಿಕ ಚರಕವನ್ನು ತಿರುಗಿಸಿ, ಖುಷಿಪಟ್ಟಿದ್ದಾರೆ.
ಈ ವೇಳೆ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮ ಗಾಂಧಿ ಅವರನ್ನು ಸ್ಮರಿಸಿ ತಮ್ಮ ಅಭಿಪ್ರಾಯ ಬರೆದಿದ್ದಾರೆ. ‘ಅಸಾಧಾರಣ ವ್ಯಕ್ತಿಯ ಆಶ್ರಮಕ್ಕೆ ಬಂದಿರುವುದು ಬಹಳ ಖುಷಿಯ ವಿಚಾರ’ ಎಂದಿದ್ದಾರೆ.
ಇದಾದ ಬಳಿಕ ವಡೋದರಾದ ಬೃಹತ್ ಜೆಸಿಬಿ ಯಂತ್ರ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ್ದು, ಹೊಸ ಫ್ಲ್ಯಾಟ್​ಗೆ ಚಾಲನೆ ನೀಡಿದರು. ಇದರ ಬೆನ್ನಲ್ಲೇ ಕೈಗಾರಿಕೋದ್ಯಮಿ ಗೌತಮ್ ಅದಾನಿ ಜೊತೆ ಮಹತ್ವದ ಮಾತುಕತೆ ನಡೆಸಿದರು.
ಬ್ರಿಟಿಷ್ ಪ್ರಧಾನಿ ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ವಾಣಿಜ್ಯ ಒಪ್ಪಂದಗಳ ರಾಫ್ಟ್ ಅನ್ನು ಘೋಷಿಸುತ್ತಾರೆ ಮತ್ತು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಲ್ಲಿ ‘ಹೊಸ ಯುಗ’ವನ್ನು ಶ್ಲಾಘಿಸುತ್ತಾರೆ ಎಂದು ಯುಕೆ ಹೈ ಕಮಿಷನ್ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!