ಮೇಘನ್ ಮಾರ್ಕೆಲ್ ಕುರಿತ ದ್ವೇಷ ಲೇಖನಕ್ಕೆ ಕ್ಷಮೆಯಾಚಿಸಿದ ಬ್ರಿಟಿಷ್ ಟ್ಯಾಬ್ಲಾಯ್ಡ್ ‘ದಿ ಸನ್’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಿನ್ಸ್ ಹ್ಯಾರಿ ಪತ್ನಿ ಮೇಘನ್‌ ಮಾರ್ಕೆಲ್‌ ವಿರುದ್ಧ ದ್ವೇಷಕಾರಿ ಟಾಪ್ ಗೇರ್ ಮಾಜಿ ನಿರೂಪಕ ಜೆರೆಮಿ ಕ್ಲಾರ್ಕ್ಸನ್ ಬರೆದಿದ್ದ ಅಂಕಣದ ಕುರಿತಾಗಿ ಭಾರಿ ಆಕ್ರೋಶ, ಟೀಕೆಗಳು ವ್ಯಕ್ತವಾದ ಬಳಿಕ ಬ್ರಿಟಿಷ್ ಟ್ಯಾಬ್ಲಾಯ್ಡ್ ʼದಿ ಸನ್ʼ ಈ ಲೇಖಲ ಪ್ರಕಟಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದೆ.
ಕಳೆದ ವಾರ ʼದಿ ಸನ್‌ʼ ಪ್ರಕಟಿಸಿದ್ದ ಕ್ಲಾರ್ಕ್ಸನ್ ರ ಲೇಖನದಲ್ಲಿ, ಮೇಘನ್ ರ ಕುರಿತಾಗಿ ಅವಹೇಳನಕಾರಿ ವಿಚಾರಗಳನ್ನು ಹೇಳಲಾಗಿತ್ತು. ಅಂಕಣದ ವಿರುದ್ಧ‌ ಇಂಗ್ಲೆಂಡ್ ಇಂಡಿಪೆಂಡೆಂಟ್ ಪ್ರೆಸ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (Ipso)ಗೆ 20,000 ಕ್ಕಿಂತ ಹೆಚ್ಚಿನ ದಾಖಲೆ ಸಂಖ್ಯೆಯ ದೂರುಗಳು ಬಂದಿದ್ದವು.  ಲೇಖಕ ಫಿಲಿಪ್ ಪುಲ್ಮನ್ ಮತ್ತು ಲಂಡನ್ ಮೇಯರ್ ಸಾದಿಕ್ ಖಾನ್ ಸೇರಿದಂತೆ ಅನೇಕ ಉನ್ನತ ವ್ಯಕ್ತಿಗಳು ಈ ಲೇಖನವನ್ನು ಕಟುವಾಗಿ ಟೀಕಿಸಿದ್ದರು.
ದಂಪತಿಗಳ ಇತ್ತೀಚಿನ ನೆಟ್‌ಫ್ಲಿಕ್ಸ್ ಡಾಕ್ಯುಸರೀಸ್ “ಹ್ಯಾರಿ ಮತ್ತು ಮೇಘನ್” ಗೆ ಪ್ರತಿಕ್ರಿಯೆಯಾಗಿ ಈ ಲೇಖನವನ್ನು ಬರೆಯಲಾಗಿತ್ಆತು. ಆದರೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ಅದನ್ನು ಪತ್ರಿಕೆಯ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ.
“ಪತ್ರಿಕೆಯಲ್ಲಿ ನಾವು ಈ ಲೇಖನದ ಪ್ರಕಟಣೆಗೆ ವಿಷಾದಿಸುತ್ತೇವೆ” ಎಂದು ದಿ ಸನ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ. ಲೇಖನವನ್ನು ನಮ್ಮ ಎಲ್ಲಾ ತಾಣಗಳಿಂದ ತೆಗೆದುಹಾಕಲಾಗುವುದು ಎಂದು ಅದು ಸೇರಿಸಿದೆ. “ಅಂಕಣಕಾರರ ಅಭಿಪ್ರಾಯಗಳು ತಮ್ಮದೇ ಆದವು, ಆದರೆ ಪ್ರಕಾಶಕರಾಗಿ, ಮುಕ್ತ ಅಭಿವ್ಯಕ್ತಿಯೊಂದಿಗೆ ಜವಾಬ್ದಾರಿ ಬರುತ್ತದೆ ಎಂದು ನಾವು ಅರಿತುಕೊಂಡಿದ್ದೇವೆ” ಎಂದು ದಿ ಸನ್ ಹೇಳಿದೆ.
ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರದಲ್ಲಿ, ಹ್ಯಾರಿ ಮತ್ತು ಮೇಘನ್, ಯುಕೆ ಟ್ಯಾಬ್ಲಾಯ್ಡ್ ಪ್ರೆಸ್ ವಿರುದ್ಧ ವರ್ಣಭೇದ ನೀತಿಯ ಆರೋಪ ಮಾಡಿದ್ದರು. ಅವರು ನನ್ನನ್ನು ನಾಶಪಡಿಸಲು ಯತ್ನಿಸುತ್ತಿದ್ದಾರೆ ಎಂದು ಮೇಘನ್‌ ಆರೋಪಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!