ಐದು ವರ್ಷದಲ್ಲಿ ಅರುಣಾಚಲ ಪ್ರದೇಶದಲ್ಲಿ 3,097 ಕಿ.ಮೀ ರಸ್ತೆ ನಿರ್ಮಿಸಿದ ಬಿಆರ್‌ಒ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಚೀನಾ ಯೋಧರ ಸಂಘರ್ಷಕ್ಕೆ ವೇದಿಕೆಯಾಗಿದ್ದ ತವಾಂಗ್ ಸೆಕ್ಟರ್ ವಿಚಾರ ಇನ್ನೂ ಚಾಲನೆಯಲ್ಲಿದ್ದಂತೆಯೇ ಇತ್ತ ಬಿಆರ್‌ಒ( ಬಾರ್ಡರ್ ರೋಡ್ಸ್ ಆರ್ಗನೈಸೇಷನ್) ಕಳೆದ ಐದು ವರ್ಷದಲ್ಲಿ ಅರುಣಾಚಲ ಪ್ರದೇಶದಲ್ಲಿ 3,097 ಕಿ.ಮೀ. ರಸ್ತೆ ನಿರ್ಮಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಬಿಆರ್‌ಒ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ 3,140 ಕಿ.ಮೀ ರಸ್ತೆಗಳನ್ನು ನಿರ್ಮಿಸಿದೆ ಎಂದು ಸರ್ಕಾರ ತಿಳಿಸಿದೆ. ಐದು ವರ್ಷಗಳಲ್ಲಿ ರೋಲ್ ಓವರ್ ವರ್ಕ್ಸ್ ಯೋಜನೆ ಆಧರಿಸಿ ಸೇನೆಯು ನಿಗದಿಪಡಿಸಿದ ಆದ್ಯತೆ ಅನುಸರಿಸಿ ರಸ್ತೆ ನಿರ್ಮಾಣವನ್ನು ರಕ್ಷಣಾ ಸಚಿವಾಲಯವು ಬಿಆರ್‌ಒಗೆ ವಹಿಸಿದೆಎ ಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ತಿಳಿಸಿದ್ದಾರೆ.

ಸಂಸತ್ತಿನಲ್ಲಿ ತಮ್ಮ ಲಿಖಿತ ಪ್ರತಿ ಬಳಸಿ ಮಾಹಿತಿ ನೀಡಿದ್ದು, ಕಳೆದ ಐದು ವರ್ಷದಲ್ಲಿ 10 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ 13,525.417 ಕಿ,ಮೀ ವ್ಯಾಪ್ತಿಯ ಒಟ್ಟು 257 ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!