ಇಂದು ಖಮ್ಮಂನಲ್ಲಿ ಬಿಆರ್‌ಎಸ್ ಬಹಿರಂಗ ಸಭೆ: ದೆಹಲಿ, ಕೇರಳ, ಪಂಜಾಬ್ ಸಿಎಂ ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ರಚನಾ ಸಭೆ ಇಂದು ಖಮ್ಮದಲ್ಲಿ ನಡೆಯಲಿದೆ. ಬಿಆರ್ ಎಸ್ ಸಭೆಗೆ ಎಲ್ಲವೂ ಸಿದ್ಧವಾಗಿದೆ. ಸಿಎಂ ಕೆಸಿಆರ್ ನೇತೃತ್ವದಲ್ಲಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿರುವ ಬಿಆರ್ ಎಸ್ ರಚನೆಗೆ ಸಭೆ ಸಜ್ಜಾಗಿದೆ. 100 ಎಕರೆಯಲ್ಲಿ ಬಿಆರ್‌ಎಸ್‌ ಸಭೆಗೆ ಅದ್ಧೂರಿ ವ್ಯವಸ್ಥೆ ಮಾಡಲಾಗಿದ್ದು, ಈ ಸಭೆಗೆ 5 ಲಕ್ಷ ಜನ ಬರುವ ನಿರೀಕ್ಷೆಯಿದೆ. ಪಕ್ಷ ರಚನೆ ಬಳಿಕ ನಡೆಯುತ್ತಿರುವ ಮೊದಲ ಸಾರ್ವಜನಿಕ ಸಭೆ ಇದಾಗಿರುವುದರಿಂದ ಎಲ್ಲರ ಕಣ್ಣು ಈ ಸಭೆಯತ್ತ ನೆಟ್ಟಿದೆ. ಐದು ಲಕ್ಷ ಜನರಿಗಾಗಿ ಸಿದ್ಧಪಡಿಸಲಾದ ಮೈದಾನದಲ್ಲಿ ಸಭೆಯ ವ್ಯವಸ್ಥೆಗಳು ಪೂರ್ಣಗೊಂಡಿವೆ.

ಪಕ್ಷದ ರಾಷ್ಟ್ರೀಯ ಕಾರ್ಯಸೂಚಿಯ ಜೊತೆಗೆ ಬಿಜೆಪಿಗೆ ಪರ್ಯಾಯವಾಗಿ ಕೆಸಿಆರ್ ತಮ್ಮ ಪಕ್ಷದ ಕಾರ್ಯಸೂಚಿಯನ್ನು ಈ ವೇದಿಕೆಯಲ್ಲಿ ಬಹಿರಂಗಪಡಿಸಲಿದ್ದಾರೆ. ಆರು ರಾಜ್ಯ ಪಕ್ಷದ ಶಾಖೆಗಳು ಮತ್ತು ರೈತರ ವಿಭಾಗಗಳನ್ನು ಸಹ ಘೋಷಿಸಲಾಗುವುದು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾರ್, ಕೇರಳ ಸಿಎಂ ಪಿಣರಾಯಿ ವಿಜಯನ್, ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್, ಸಮಾಜವಾದಿ ಪಕ್ಷದ ಅಧ್ಯಕ್ಷ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ಸಿಪಿಐ ರಾಷ್ಟ್ರೀಯ ಪ್ರಧಾನಿ ಡಿ.ರಾಜಾ ಭಾಗವಹಿಸಲಿದ್ದಾರೆ.

ದೆಹಲಿ, ಕೇರಳ ಮತ್ತು ಪಂಜಾಬ್ ಸಿಎಂಗಳು ಈಗಾಗಲೇ ಹೈದರಾಬಾದ್ ತಲುಪಿದ್ದಾರೆ. ಮೊದಲು ದೆಹಲಿಯಲ್ಲಿ ಬಿಆರ್ ಎಸ್ ಸಭೆ ನಡೆಸಬೇಕು ಎಂದು ಕೆಸಿಆರ್ ಭಾವಿಸಿದ್ದರು. ನಾಯಕರೊಂದಿಗೆ ಚರ್ಚಿಸಿದ ನಂತರ ಮೊದಲ ಹಂತದ ತೆಲಂಗಾಣ ಚಳವಳಿಗೆ ಅಡಿಪಾಯ ಹಾಕಿದ ಖಮ್ಮಂ ಉತ್ತಮ ಎಂದು ನಿರ್ಧರಿಸಿ ಇಲ್ಲಿ ಸಭೆ ಆಯೋಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!