ಗಡಿಯಲ್ಲಿ ಪಾಕ್‌ ಡ್ರೋನ್‌ ಹೊಡೆದುರುಳಿಸಿದ BSF: ಹೆರಾಯಿನ್‌, ಮದ್ದು-ಗುಂಡುಗಳಿರುವ ಪ್ಯಾಕೆಟ್‌ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಮತ್ತೆ ಡ್ರೋನ್‌ ಹಾವಳಿ ಮುಂದುವರೆದಿದೆ. ನಿನ್ನೆಯಷ್ಟೇ ಹೆಕ್ಸಾಕಾಪ್ಟರ್‌ ಡ್ರೋನ್‌ ಹೊಡೆದುರುಳಿಸಿದ ಬೆನ್ನಲ್ಲೇ ಬೆನ್ನಲ್ಲೇ ಇಂದು ಮತ್ತೊಂದು ಡ್ರೋನ್‌ ಕಾಣಿಸಿಕೊಂಡಿದೆ. ಗುಂಡು ಹಾರಿಸುವ ಮೂಲಕ ಡ್ರೋನ್‌ ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ 7.5 ಕೆಜಿ ಶಂಕಿತ ಹೆರಾಯಿನ್, 1 ಪಿಸ್ತೂಲ್, 2 ಮ್ಯಾಗಜೀನ್‌ಗಳು ಮತ್ತು 50 ಸುತ್ತು 9 ಎಂಎಂ ಮದ್ದುಗುಂಡುಗಳನ್ನು ಒಳಗೊಂಡಿರುವ 3 ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿವೆ.

ಇವುಗಳನ್ನು ಚುರಿವಾಲಾ ಚುಸ್ತಿ, ಫಾಜಿಲ್ಕಾ ಬಳಿಯ ಪ್ರದೇಶದಲ್ಲಿ ಪಾಕಿಸ್ತಾನದಿಂದ ಪ್ರವೇಶಿಸಿದ ಡ್ರೋನ್ ಮೂಲಕ ಸಾಗಿಸಲಾಗುತ್ತಿತ್ತು ಎಂದು ಬಿಎಸ್‌ಎಫ್‌ ಅಧಿಕಾರಿಯೊಬ್ಬರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!