ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಹಿರಿಯ ಬಂಗಾಳಿ ಚಿತ್ರನಿರ್ದೇಶಕ ಮತ್ತು ಖ್ಯಾತ ಕವಿ ಬುದ್ಧದೇಬ್ ದಾಸ್ಗುಪ್ತ ಅವರು ನಿಧನರಾಗಿದ್ದಾರೆ.
77 ವರ್ಷದ ದಾಸ್ಗುಪ್ತ ಕೆಲ ಕಾಲದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು. ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ದಕ್ಷಿಣ ಕೊಲ್ಕತದ ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಗುಪ್ತಾ ಅವರ ನಿರ್ದೇಶನದ 5 ಸಿನಿಮಾಗಳಿಗೆ ನ್ಯಾಷನಲ್ ಫಿಲಂ ಅವಾರ್ಡ್ಗಳು ಲಭಿಸಿವೆ. ಎರಡು ಸಲ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಬಾಗ್ ಬಹದೂರ್, ಲಾಲ್ ದರ್ಜಾ, ಕಾಲ್ಪುರುಷ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಬುದ್ಧದೇಬ್ ದಾಸ್ಗುಪ್ತ ನಿಧನಕ್ಕೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಚಿತ್ರರಂಗದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.