ರಾಜ್ಯ ಬಜೆಟ್|‌ ಪ್ರವಾಸೋದ್ಯಮ ಉನ್ನತೀಕರಣ, ಐತಿಹಾಸಿಕ-ಧಾರ್ಮಿಕ ಸ್ಥಳಗಳಲ್ಲಿ ಹೈಟೆಕ್‌ ಸ್ಪರ್ಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಬಾರಿಯ ಬಜೆಟ್‌ನಲ್ಲಿ ಪ್ರವಾಸೋದ್ಯಮ ಉನ್ನತೀಕರಣ ಮತ್ತು ಐತಿಹಾಸಿಕ-ಧಾರ್ಮಿಕ ಸ್ಥಳಗಳಲ್ಲಿ ಹೈಟೆಕ್‌ ಸ್ಪರ್ಶ ನೀಡಲು ಮುಂದಾಗಿದೆ.

  • ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗಳಿಗೆ ಮೂಲಸೌಕರ್ಯ ಒದಗಿಸಲು 100 ಕೋಟಿ ರೂಪಾಯಿ ಟೆಂಡ‌ರ್‌ ಕರೆಯಲಾಗಿದೆ.
  • ಮೈಸೂರಿನ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಘೋಷಣೆ
  • ಹಂಪಿಯ ಸ್ಮಾರಕ ಅಭಿವೃದ್ಧಿ ಮತ್ತು ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಶಾಶ್ವತ ಸೌಲಭ್ಯ ಅಭಿವೃದ್ಧಿ ಯೋಜನೆಗೆ ಮಂಜೂರು
  • ಹಂಪಿಯ ವಿಜಯವಿಠಲ ದೇವಾಲಯ, ಪುರಂದರ ಮಂಟಪ, ವಿಜಯಪುರದ ಗೋಲ್ ಗುಂಬಜ್‌, ಚಿಕ್ಕಬಳ್ಳಾಪುರದ ಭೋಗನಂದೀಶ್ವರ ಬಾದಾಮಿ ಗುಹೆಗಳು, ಕಿತ್ತೂರು ಹಾಗೂ ಬೀದರ್ ಕೋಟೆಗಳನ್ನು ಅಭಿವೃದ್ಧಿಪಡಿಸಲಾಗುವುದು
  • ಈ ಸ್ಥಳಗಳಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, 3ಡಿ ಧ್ವನಿ ಬೆಳಕು ಪ್ರದರ್ಶನ ಆಳವಡಿಕೆಗಾಗಿ 60 ಕೋಟಿ ರೂ. ಮೀಸಲು
  • ಗೈಡ್‌ಗಳ ಪ್ರೋತ್ಸಾಹ ಧನ  2,000 ದಿಂದ 5,000 ರೂ. ಹೆಚ್ಚಳ ಇದಕ್ಕಾಗಿ ಒಟ್ಟು 1.10 ಕೋಟಿ ರೂ. ಅನುದಾನ
  • ನಂದಿಗಿರಿಧಾಮದಲ್ಲಿ ರೋಪ್‌ ವೇ ನಿರ್ಮಾಣಕ್ಕೆ ಅನುಮತಿ
  • ರಾಣಿ ಚೆನ್ನಭೈರಾದೇವಿ ಅವರ ಹೆಸರನ್ನು ಶಾಶ್ವತಗೊಳಿಸಲು ಹೊನ್ನಾವರದಲ್ಲಿ ‘ಚೆನ್ನಭೈರಾದೇವಿ ಸ್ಮಾರಕ ಉದ್ಯಾನ’ ನಿರ್ಮಾಣ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!