ಬಜೆಟ್ ಮುಖ್ಯಾಂಶಗಳು 2023: ಆದಾಯ ತೆರಿಗೆ ರಚನೆಯಲ್ಲಿ ದೊಡ್ಡ ಬದಲಾವಣೆ ಮತ್ತು ಇತರೆ ಪ್ರಮುಖ ಘೋಷಣೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್‌ ಅನ್ನು ಮಂಡಿಸಿದರು.

ಆರಂಭಿಕ ಭಾಷಣದಲ್ಲಿ ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ ಮತ್ತು ಉಜ್ವಲ ಭವಿಷ್ಯದತ್ತ ಸಾಗುತ್ತಿದೆ ಎಂದು ಹೇಳಿದರು. ತೆರಿಗೆದಾರರು ಮತ್ತು ಆರ್ಥಿಕತೆಗೆ ಉತ್ತೇಜನ ನೀಡುವಲ್ಲಿ, ಸೀತಾರಾಮನ್ ಹೊಸ ತೆರಿಗೆ ಆಡಳಿತದ ಅಡಿಯಲ್ಲಿ ತೆರಿಗೆ ಸ್ಲ್ಯಾಬ್‌ಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮತ್ತು ರೈಲ್ವೆ ಮತ್ತು ಬಂಡವಾಳ ವೆಚ್ಚಗಳಿಗೆ ದೊಡ್ಡ ಉತ್ತೇಜನವನ್ನು ಘೋಷಿಸಿದರು.

  • ಬಜೆಟ್ 2023 ರ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ :2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ₹5.94 ಲಕ್ಷ ಕೋಟಿ ಮೀಸಲಿಡಲಾಗಿದೆ.
  • ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂಪಾಯಿಯಿಂದ 7 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. 7.ಲಕ್ಷದವರೆಗೆ ಆದಾಯವುಳ್ಳವರಿಗೆ ಯಾವುದೇ ತೆರಿಗೆ ಇರುವುದಿಲ್ಲ.
  • ಬೆಲೆ ಏರಿಕೆಯಾದ ಸರಕುಗಳ ವಿವರ – ಸಿಗರೇಟ್, ಎಲೆಕ್ಟ್ರಿಕ್ ಚಿಮಣಿ, ಆಮದು ಮಾಡಿಕೊಂಡ ರಬ್ಬರ್, ಚಿನ್ನ, ಬೆಳ್ಳಿ, ಬ್ರಾಂಡೆಡ್ ಬಟ್ಟೆಗಳು, ಪ್ಲಾಟಿನಮ್, ವಜ್ರ, ಎಕ್ಸ್​ರೇ, ಹೆಡ್​ಫೋನ್, ಇಯರ್ ಫೋನ್, ವೈದ್ಯಕೀಯ ಉತ್ಪನ್ನಗಳು ದುಬಾರಿಯಾಗಲಿವೆ.
  • ಬೆಲೆ ಕಡಿಮೆಯಾದ ಸರಕುಗಳ ವಿವರ: ಮೊಬೈಲ್ ಫೋನ್, ಲ್ಯಾಪ್‌ಟಾಪ್‌, ಸೈಕಲ್, ಎಲ್​ಇಡಿ ಟಿವಿ, ಟಿವಿ ಪ್ಯಾನಲ್, ಆಟೊಮೊಬೈಲ್, ಜವಳಿ, ಎಲೆಕ್ಟ್ರಿಕ್ ವಾಹನ, ಕ್ಯಾಮೆರಾ ಲೆನ್ಸ್, ಜೈವಿಕ ಅನಿಲ ಆಧಾರಿತ ಉತ್ಪನ್ನಗಳು
  • ಕೃಷಿ ವೇಗವರ್ಧಕ ನಿಧಿ ಸ್ಥಾಪನೆ : ಯುವ ಉದ್ಯಮಿಗಳು ಕೃಷಿ-ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಲು ಉತ್ತೇಜಕ ಕ್ರಮವಾಗಿ ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು.
  • ರಾಜ್ಯಗಳ ಸಕ್ರಿಯ ಭಾಗವಹಿಸುವಿಕೆ, ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮಕ್ಕೆ ಉತ್ತೇನ ನೀಡಲಾಗುವುದು.
  • ಸೂಕ್ಷ್ಮ ನೀರಾವರಿ ಪ್ರೋತ್ಸಾಹಿಸಲು ಭದ್ರಾ ಮೇಲ್ದಂಡೆಗೆ ₹5,300 ಕೋಟಿ ಅನುದಾನ
  • 2014ರ ನಂತರ ಆರಂಭವಾಗಿರುವ 157 ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜು ಆರಂಭಿಸಲಾಗುವುದು.
  • ಪ್ರಧಾನ ಮಂತ್ರಿ ಆವಾಸ್ ಯೋಜನೆ ಶೇಕಡ 66ರಷ್ಟು ವಿಸ್ತರಿಸಲಾಗಿದ್ದು, ಅನುದಾನ ₹79,000 ಕೋಟಿಗೆ ಹೆಚ್ಚಿಸಲಾಗಿದೆ
  • ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರ ನೇಮಕ
  • ಶೇ 7.5 ಬಡ್ಡಿಯೊಂದಿಗೆ ಗರಿಷ್ಠ 2 ಲಕ್ಷ ರೂ.ವರೆಗೆ ಠೇವಣಿ ಮಾಡಲು ಮಹಿಳಾ ಸಮ್ಮಾನ್‌ ಅಡಿ ಅವಕಾಶ
  • ʼಒಂದು ಜಿಲ್ಲೆ ಒಂದು ಉತ್ಪನ್ನ’ ವಸ್ತುಗಳು ಮತ್ತು ಜಿಐ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ಯೂನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ಉತ್ತೇಜನ ನೀಡಲಾಗುತ್ತದೆ.
  • ಯುವಕರ ಕೌಶಲ್ಯ ತರಬೇತಿಗಾಗಿ ‘ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0’ ಅನ್ನು ಪ್ರಾರಂಭಿಸಲಾಗುವುದು
  • ಪ್ರವಾಸೋದ್ಯಮವನ್ನು ಉತ್ತೇಜಿಸಲು ‘ಚಾಲೆಂಜ್ ಮೋಡ್’ ಮೂಲಕ 50 ಸ್ಥಳಗಳನ್ನು ಆಯ್ಕೆ ಮಾಡಲು ಸರ್ಕಾರ ನಿರ್ಧರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!