Sunday, April 11, 2021

Latest Posts

ಮಹಿಳೆಯರ ದಿನದಂದೇ ಬಜೆಟ್, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಗಲಿ: ಶೋಭಾ ಕರಂದ್ಲಾಜೆ

ದಿಗಂತ ವರದಿ ಉಡುಪಿ:

ಮಹಿಳಾ ದಿನಾಚರಣೆಯಂದೇ ಬಜೆಟ್ ಮಂಡನೆಯಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಕೊಡುವ ಭರವಸೆ ಇದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸೋಮವಾರ ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಅವರು ಉಡುಪಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಮನೆಗಳನ್ನು ಮುನ್ನಡೆಸುವವರೇ ಮಹಿಳೆಯರು. ಅವರ ಕೈಗೆ ದುಡ್ಡು ಕೊಟ್ಟರೆ ಆ ಹಣ ಪೋಲಾಗುವುದಿಲ್ಲ. ಸರಕಾರ ಕೊಟ್ಟ ಹಣ ದುರಭ್ಯಾಸಗಳಿಗೆ ದುರ್ಬಳಕೆಯಾಗುವುದಿಲ್ಲ. ಮಹಿಳೆಯರನ್ನೇ ಕೇಂದ್ರೀಕರಿಸಿ ಬಜೆಟ್ ನೀಡಿ ಎಂದು ಮುಖ್ಯಮಂತ್ರಿಯವರನ್ನು ವಿನಂತಿ ಮಾಡಿದ್ದೇನೆ ಎಂದು ಸಂಸದೆ ಕರಂದ್ಲಾಜೆ ತಿಳಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss