ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಬಜೆಟ್ ಮಂಡನೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಫೆಬ್ರವರಿ ಎರಡನೇ ವಾರದಲ್ಲಿ ಮಂಡನೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡಿಸೆಂಬರ್ ಅಂತ್ಯದವರೆಗೂ ರಾಜ್ಯದ ತೆರಿಗೆ ಸಂಗ್ರಹ ಗುರಿ ಮೀರಿ ಆಗಿದೆ ಎಂದರು. ತೆರಿಗೆ ಸಂಗ್ರಹಕ್ಕೆ ಅನುಗುಣವಾಗಿ ಬಜೆಟ್ ತಯಾರಿ ಕೂಡ ನಡೆದಿದೆ. ಈ ಸಂಬಂಧ ಬೇರೆ ಬೇರೆ ಇಲಾಖೆಗಳೊಂದಿಗೆ ಸಂಕ್ರಾಂತಿ ನಂತರ ಸಭೆಗಳನ್ನು ನಡೆಸಲಾಗುವುದು. ಫೆಭ್ರವರಿ ಎರಡನೇ ವಾರದಲ್ಲಿ ಜನಪರವಾದ ಬಜೆಟ್ ಮಂಡಿಸಲಾಗುವುದು ಎಂದರು.
ರಾಜ್ಯದಲ್ಲಿ 25 ಟೆಕ್ಸ ಟೈಲ್ ಪಾರ್ಕ್ ಗಳನ್ನು ಆರಂಭಿಸುವ ಚಿಂತನೆ ಇದೆ. ರಾಜ್ಯದಲ್ಲಿ ಹತ್ತಿ ಉತ್ಪಾದನೆ ಹೆಚ್ಚಾಗಿದೆ ಆದರೆ ಅದರ ಉತ್ಪನ್ನಗಳ ತಯಾರಿಕೆಯ ಕಡಿಮೆ ಇದೆ ಈ ಹಿನ್ನೆಲೆಯಲ್ಲಿ ರಾಜ್ಯದಲ್ಕಿ 25 ಟೆಕ್ಸ್ ಟೈಲ್ ಪಾರ್ಕ್ ಗಳನ್ನು ಆರಂಭಿಸುವ ಉದ್ದೇಶವಿದ್ದು, ಈ ಬಾರಿಯ ಬಜೆಟ್ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲಾಗುವುದು ಎಂದರು.