ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಜನವರಿ 31 ರಿಂದ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸಂಸತ್​ನ ಬಜೆಟ್ ಅಧಿವೇಶನ (Parliament’s Budget Session) ಜನವರಿ 31 ರಿಂದ ಏಪ್ರಿಲ್ 6ರ ವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಶುಕ್ರವಾರ ತಿಳಿಸಿದ್ದಾರೆ.

ಹಲವು ಗೊಂದಲಗಳ ನಡುವೆ ಕಳೆದ ತಿಂಗಳು ಚಳಿಗಾಲದ ಅಧಿವೇಶನವನ್ನು ಮೊಟಕುಗೊಳಿಸಲಾಗಿತ್ತು. “ಸಂಸತ್ತಿನ ಬಜೆಟ್ ಅಧಿವೇಶನ, 2023 ಜನವರಿ 31 ರಿಂದ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 6 ರವರೆಗೆ ಅಂದರೆ 66 ದಿನಗಳ ಕಾಲ ಸಾಮಾನ್ಯ ವಿರಾಮದೊಂದಿಗೆ 27 ಅಧಿವೇಶನಗಳನ್ನು ವಿಸ್ತರಿಸುತ್ತದೆ. ಅಮೃತ್ ಕಾಲ್ ನಡುವೆ ರಾಷ್ಟ್ರಪತಿಗಳ ಭಾಷಣ, ಕೇಂದ್ರ ಬಜೆಟ್ ಮತ್ತು ಇತರ ವಿಷಯಗಳ ಮೇಲೆ ಧನ್ಯವಾದಗಳ ಪ್ರಸ್ತಾಪದ ಚರ್ಚೆಗಳನ್ನು ಎದುರುನೋಡುತ್ತಿದೆ. ” ಎಂದು ಕೇಂದ್ರ ಸಚಿವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

“2023ರ ಬಜೆಟ್ ಅಧಿವೇಶನದಲ್ಲಿ, ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗಳು ಅನುದಾನಕ್ಕಾಗಿ ಬೇಡಿಕೆಗಳನ್ನು ಪರಿಶೀಲಿಸಲು ಮತ್ತು ತಮ್ಮ ಸಚಿವಾಲಯಗಳು / ಇಲಾಖೆಗಳಿಗೆ ಸಂಬಂಧಿಸಿದ ವರದಿಗಳನ್ನು ಮಾಡಲು ಅನುವು ಮಾಡಿಕೊಡಲು ಫೆಬ್ರವರಿ 14 ರಿಂದ ಮಾರ್ಚ್ 12 ರವರೆಗೆ ಬಿಡುವು ನೀಡಲಾಗುವುದು” ಎಂದು ಅವರು ಹೇಳಿದರು.

ಫೆಬ್ರವರಿ 1ರಂದು ಬಜೆಟ್ ಮಂಡನೆ :
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಬುಧವಾರ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಹಿಂದಿನ ವರ್ಷಗಳಂತಲ್ಲದೆ, ಈ ಬಾರಿ ಬಜೆಟ್ ಅಧಿವೇಶನದ ಎರಡನೇ ದಿನ ಬಜೆಟ್ ಮಂಡನೆಯಾಗಲಿದೆ. ಜನವರಿ 31ರಂದು ಹಣಕಾಸು ಸಚಿವರು ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡಲಿದ್ದಾರೆ. ಬಜೆಟ್ ಮಂಡನೆ ಪ್ರಕ್ರಿಯೆಯನ್ನು ಆನ್​ಲೈನ್​ನಲ್ಲಿ ನೋಡಬೇಕಿದ್ದರೆ ಪಿಐಬಿಯ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲಿ ವೀಕ್ಷಿಸಬಹುದಾಗಿದೆ. ನೇರ ಪ್ರಸಾರವನ್ನು ದೂರದರ್ಶನ ಮತ್ತು ಸಂಸದ್ ಟಿವಿಯಲ್ಲಿ ನೋಡಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!