ಬೆಂಕಿ ನಂದಿಸುವ ಕೈಗಳಿಗೆ ಬಜೆಟ್ ಆಸರೆ: ಅಗ್ನಿಶಾಮಕ ದಳದ ಭತ್ಯೆ 300ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ಬಾರಿಯ ಆಯವ್ಯಯದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿಗಳಿಗೆ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಕಠಿಣ ಪರಿಸ್ಥಿತಿಗಳಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಆಹಾರ ಭತ್ಯೆಯನ್ನು ವೃದ್ಧಿಸಲಾಗಿದೆ. ಈ ಹಿಂದೆ ಪ್ರತಿ ದಿನಕ್ಕೆ 150 ರೂಪಾಯಿಗಳಿದ್ದ ಭತ್ಯೆಯನ್ನು ಈಗ ನೇರವಾಗಿ 300 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದು ಇಲಾಖೆಯ ಸಾವಿರಾರು ಸಿಬ್ಬಂದಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ.