Wednesday, June 29, 2022

Latest Posts

ದೇಶ ಕೊರೊನಾ ಮುಕ್ತವಾಗಲೆಂದು ಬೌದ್ಧ ಬಿಕ್ಕುಗಳಿಂದ ಪೂಜೆ

ದಿಗಂತ ವರದಿ ಮೈಸೂರು:

ದೇಶವು ಕೊರೋನಾ ವೈರಸ್ ಹಾವಳಿಯಿಂದ ಮುಕ್ತವಾಗಲಿ ಎಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಟಿಬೆಟಿಯನ್ ಕ್ಯಾಂಪಸ್‌ನಲ್ಲಿ ಬೌದ್ಧ ಬಿಕ್ಕುಗಳು ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ನೆರವೇರಿಸಿದರು.
ಟಿಬೆಟಿಯನ್ ಅಗ್ರಿಕಲ್ಚರ್ ಸೊಸೈಟಿಯಿಂದ ಆಯೋಜಿಸಲಾಗಿದ್ದ ಈ ಪೂಜಾ ಕೈಂಕರ್ಯದಲ್ಲಿ
ಶಾಂತಿದೂತ ದಲೈಲಾಮಾ ಭಾವಚಿತ್ರವಿರಿಸಿ, ಅದರ ಮುಂದೆ ಜ್ಯೂಸ್, ಧಾನ್ಯ, ಮೈದಾಹಿಟ್ಟು, ಗೋಧಿ ಹಿಟ್ಟು ಇಟ್ಟು ಪೂಜೆ ಸಲ್ಲಿಸಲಾಯಿತು. ಬೌದ್ದ ಬಿಕ್ಕುಗಳು ಕೈಯಲ್ಲಿ ಗೋಧಿ ಹಿಟ್ಟು ಹಿಡಿದು ಮಂತ್ರ ಪಠಿಸಿದರು.
ಇದೇ ವೇಳೆ ಕೊರೋನಾ ಸೋಂಕಿನಿAದ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss