ದೆಹಲಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಪತನ: ಕಾಂಕ್ರೀಟ್ ರಾಶಿಯಡಿ ಸಿಲುಕಿದ 8ಕ್ಕೂ ಹೆಚ್ಚು ಮಂದಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜಧಾನಿ ದೆಹಲಿಯಲ್ಲಿ ಸುರಿಯುತ್ತಿರುವ ಮಳೆಯ ಮಧ್ಯೆಯೇ ಭೀಕರ ಅಪಘಾತವೊಂದು ಸಂಭವಿಸಿದೆ. ನವದೆಹಲಿಯ ರೋಹಿಣಿ ಸೆಕ್ಟರ್ 16ರ ಎಂಸಿಡಿ (MCD) ಶಾಲೆ ಎದುರು ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ವಸತಿ ಕಟ್ಟಡವೊಂದು ಬುಧವಾರ ಸಂಜೆ ಹಠಾತ್ತನೆ ಧರಾಶಾಹಿಯಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಕನಿಷ್ಠ 8 ಜನರು ಸಿಲುಕಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದ್ದು, ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ: ಕಟ್ಟಡ ಕುಸಿಯುತ್ತಿದ್ದಂತೆ ಜೋರಾದ ಶಬ್ದ ಕೇಳಿ ಸ್ಥಳೀಯ ನಿವಾಸಿಗಳು ತಕ್ಷಣವೇ ಧಾವಿಸಿ ಬಂದು … Continue reading ದೆಹಲಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಪತನ: ಕಾಂಕ್ರೀಟ್ ರಾಶಿಯಡಿ ಸಿಲುಕಿದ 8ಕ್ಕೂ ಹೆಚ್ಚು ಮಂದಿ?