ಬಿಜೆಪಿ ಸದಸ್ಯ ತ್ಯಾಗಿಯ ಅಕ್ರಮ ಕಟ್ಟಡ ನೆಲಸಮಗೊಳಿಸಿದ್ದಕ್ಕೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿ ಅವರ ಅಕ್ರಮ ಕಟ್ಟಡವನ್ನು ಬುಲ್ಡೋಜರ್‌ಗಳಿಂದ ಕೆಡವಲಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನೋಯ್ಡಾದ ಬಿಜೆಪಿ ಮುಖಂಡ ಇಷ್ಟು ವರ್ಷ ಅಕ್ರಮವಾಗಿ ಮನೆ ಕಟ್ಟಿರುವುದು ಬಿಜೆಪಿಯವರಿಗೆ ಗೊತ್ತಿರಲಿಲ್ಲವೇ? ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ ಅಂತ ಹೇಳಿ ಸಿಕ್ಕ ಸಿಕ್ಕ ಕಟ್ಟಡಗಳನ್ನು ಕೆಡವಲಾಗುತ್ತಿದೆ. ಮಹಿಳೆಗೆ ಬೆದರಿಕೆ ಹಾಕಲು 10-15 ಗೂಂಡಾಗಳನ್ನು ಕಳುಹಿಸಲು ಆತನಿಗೆ ಅಷ್ಟು ಧೈರ್ಯ ಎಲ್ಲಿಂದ ಬಂತು? ಹೆಣ್ಣನ್ನು ಇಷ್ಟು ಅಗೌರವದಿಂದ ನಡೆಸಿಕೊಳ್ಳುವುದರ ಹಿಂದೆ ಯಾರ ಕೈವಾಡವಿದೆ? ಯಾರ ಸಹಾಯವಿಲ್ಲದೆಯೇ ಅವರ ಅಕ್ರಮ ವ್ಯವಹಾರ ಇಷ್ಟು ಬೆಳೆದಿದೆಯೇ? ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಏನಿದು ಘಟನೆ?

ಶ್ರೀಕಾಂತ್ ತ್ಯಾಗಿ ಸೆಕ್ಟರ್ 93 ಬಿ ನಲ್ಲಿರುವ ಉದ್ಯಾನವನದಲ್ಲಿ ಸಸಿ ನೆಡಲು ಹೋದಾಗ ಮಹಿಳೆಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ತ್ಯಾಗಿ ಉದ್ಯಾನವನವನ್ನು ಒತ್ತುವರಿ ಮಾಡಿಕೊಂಡು ಸಸಿಗಳನ್ನು ನೆಡುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ತ್ಯಾಗಿ ಆಕೆಯನ್ನು ನಿಂದಿಸಿ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ದೇಶಾದ್ಯಂತ ವೈರಲ್ ಆಗಿದೆ.

ತ್ಯಾಗಿ ನಡತೆಯನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಪ್ರದೇಶ ಸರ್ಕಾರ ಆತನ ವಿರುದ್ಧ ಕ್ರಮ ಕೈಗೊಂಡಿದೆ. ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಇವರ ಮನೆಗೆ ಇಂದು ಬೆಳಗ್ಗೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ತೆರಳಿ ಬುಲ್ಡೋಜರ್‌ನಿಂದ‌ ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!