ಹೊಸದಿಗಂತ ವರದಿ ಕಲಬುರಗಿ:
ಆಯುಧ ಪೂಜೆಯಂದು ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ವೈರಲ್ ಆಗಿರುವ ಬಗ್ಗೆ ವಿವರಣೆ ನೀಡಿ, ಗನ್ ಪಿಸ್ತೂಲ್ ಗಳ ಲೈಸೆನ್ಸಿನ ಪ್ರತಿ ಪ್ರಸ್ತುತ ಪಡಿಸುವಂತೆ ವಿಶ್ವ ಹಿಂದು ಪರಿಷತ್ ಜಿಲ್ಲಾ ಗೌರವ ಅಧ್ಯಕ್ಷರೂ ಆದ ಲಿಂಗರಾಜಪ್ಪ ಅಪ್ಪ ಅವರಿಗೆ ದಕ್ಷಿಣ ವಿಭಾಗದ ಪೋಲಿಸ್ ಸಹಾಯಕ ಆಯುಕ್ತರು ನೋಟಿಸ್ ನೀಡಿದ್ದಾರೆ.
ಶಸ್ತ್ರಾಸ್ತ್ರಕಾಯ್ದೆ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರಿಂದ ನೋಟಿಸ್ ಜಾರಿ ಮಾಡಲಾಗಿದೆ. ಆಯುಧದ ಲೈಸೆನ್ಸ್ ಪ್ರತಿಯೊಂದಿಗೆ ವಿವರಣೆಯನ್ನು ಸಲ್ಲಿಸುಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.