ದಿಗಂತ ವರದಿ ಪಾವಗಡ :
ತಾಲೂಕಿನ ಪಳವಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಆಟೋ ಚಾಲಕನೊಬ್ಬ ಅನುಮಾನಾಸ್ಪದವಾಗಿ ಸುಟ್ಟ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಗ್ಗೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಸಾರ್ವಜನಿಕರಿಂದ ಮಾಹಿತಿ ತಿಳಿದು ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ವ್ಯಕ್ತಿ ರವಿ (45) ತಾಲೂಕಿನ ವೈಎನ್ ಹೊಸ ಕೋಟೆ ಗ್ರಾಮಕ್ಕೆ ಸೇರಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ವ್ಯಕ್ತಿ ಪ್ರತಿನಿತ್ಯ ಪಾವಗಡದಿಂದ ಭಾಗದ ಅಂಗಡಿಗಳಿಗೆ ದಿನಸಿ ಸಾಗಿಸಿಕೊಂಡು ಜೀವನ ನಿರ್ವಹಿಸುತ್ತಿದ್ದ ಎಂದಿನಂತೆ ಗುರುವಾರ ರಾತ್ರಿ ದಿನಸಿ ಸಾಗಿಸುವ ಬಾಡಿಗೆ ಕೆಲಸಕ್ಕೆ ತನ್ನ ಆಟೋದಲ್ಲಿ ಪಾವಗಡಕ್ಕೆ ಬಂದಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಪಳವಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಮನಾಸ್ಪದವಾಗಿ ಆಟೋ ಚಾಲಕ ರವಿ ಮತ್ತು ಆಟೋ ಬೆಂಕಿಯಲ್ಲಿ ಒತ್ತಿ ಉರಿದ ಸ್ಥಿತಿಯಲ್ಲಿ ಕಂಡುಬಂದಿವೆ ಆದ್ದರಿಂದ ಇದು ಕೊಲೆಯ ಅಥವಾ ಆತ್ಮಹತ್ಯೆ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.