ಹೊಸ ದಿಗಂತ ವರದಿ, ವಿಜಯಪುರ:
ಬಸ್ ಡಿಕ್ಕಿಯಾಗಿ ಬಾಲಕನೊಬ್ಬ ಸ್ಥಳದಲ್ಲೇ ಸಾವಿಗೀಡಾದ ಘಟನೆ ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದ ಬಳಿ ಶನಿವಾರ ನಡೆದಿದೆ.
ಮೃತಪಟ್ಟವನನ್ನು ಸೋಯಲ್ ಬಾಬುದಾಬ ಜಾತಗಾರ (10) ಎಂದು ಗುರುತಿಸಲಾಗಿದೆ.
ಸೋಯಲ್ ಜಾತಗಾರ ಈತನು ಲಿಂಬೆ ತೋಟದಿಂದ ಓಡಿ ಬರುವಾಗ ವೇಗದಲ್ಲಿದ್ದ ಬಸ್ ಡಿಕ್ಕಿಯಾಗಿದ್ದು, ಬಾಲಕ ಸ್ಥಳದಲ್ಲೇ ಅಸುನೀಗಿದ್ದಾನೆ.
ಬಸ್ ಅನ್ನು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.