ಹಿಮಾಚಲ ಪ್ರದೇಶದಲ್ಲಿ ಬಸ್ ಪಲ್ಟಿ: ದೆಹಲಿ ವಿವಿಯ ವಿದ್ಯಾರ್ಥಿ ಸಾವು, 40 ಮಂದಿಗೆ ಗಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಹಿಮಾಚಲ ಪ್ರದೇಶದ ಮನಾಲಿಗೆ (Manali) ಪ್ರವಾಸಕ್ಕೆ ತೆರಳುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ (Delhi University ) ಖಾಸಗಿ ಬಸ್ ಶುಕ್ರವಾರ ಬಿಲಾಸ್‌ಪುರದಲ್ಲಿ ಪಲ್ಟಿಯಾಗಿದ್ದು, ಯುವತಿಯೊಬ್ಬರು ಸಾವಿಗೀಡಾಗಿದ್ದು 40 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡೀಗಢ-ಮನಾಲಿ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕಮಲಾ ನೆಹರು ಕಾಲೇಜಿನ 35 ಮಹಿಳಾ ವಿದ್ಯಾರ್ಥಿಗಳು ಮತ್ತು ಗುಂಪಿನ ಆರು ಸಂಯೋಜಕರು ಸೇರಿದಂತೆ ಬಸ್‌ನಲ್ಲಿ 44 ಜನರಿದ್ದರು ಎಂದು ಎಸ್‌ಡಿಎಂ ಬಿಲಾಸ್‌ಪುರ್ ಅಭಿಷೇಕ್ ಕುಮಾರ್ ಗಾರ್ಗ್ ತಿಳಿಸಿದ್ದಾರೆ.
ಜೈಪುರ ಮೂಲದ ಒಬ್ಬ ವಿದ್ಯಾರ್ಥಿ ಸಾವಿಗೀಡಾಗಿದ್ದು, ಇತರ ನಾಲ್ವರಿಗೆ ಫ್ರಾಕ್ಚರ್ ಮತ್ತು ಸಣ್ಣ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!