ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊಡಗಿನಲ್ಲೂ ತಟ್ಟಿದ ಬಸ್ ಮುಷ್ಕರದ ಬಿಸಿ: ಪರ ಊರುಗಳಿಗೆ ತೆರಳುವ ಪ್ರಯಾಣಿಕರ ಪರದಾಟ

ಹೊಸ ದಿಗಂತ ವರದಿ, ಮಡಿಕೇರಿ:

ಆರನೇ ವೇತನ ಆಯೋಗದ ಶಿಫಾರಸ್ಸಿನನ್ವಯ ತಮಗೂ ವೇತನ ಹೆಚ್ಚಳ ಮಾಡಬೇಕೆನ್ನುವ ಪ್ರಮುಖ ಬೇಡಿಕೆಯನ್ನು ಮುಂದಿರಿಸಿಕೊಂಡು ರಾಜ್ಯ ರಸ್ತೆ ಸಾರಿಗೆ ನೌಕರರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಬುಧವಾರ ಬೆಳಗಿನಿಂದಲೇ ಜಿಲ್ಲಾ ಕೇಂದ್ರ ಮಡಿಕೇರಿ ಡಿಪೋದ ಎಲ್ಲಾ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಮಡಿಕೇರಿ ಸರ್ಕಾರಿ ಬಸ್ ನಿಲ್ದಾಣ ಬಸ್‍ಗಳಿಲ್ಲದೆ ಬಣಗುಡುತ್ತಿದ್ದರೆ, ಮತ್ತೊಂದೆಡೆ ಹೊರ ಊರುಗಳಿಗೆ ಪ್ರಯಾಣಿಸಲು ಬಂದಿದ್ದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವಂತಾಯಿತು.
ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯ ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳು ಬೆಳಗ್ಗಿನ ಅವಧಿಯಲ್ಲಿ ಕಾಣಿಸಿಕೊಂಡರಾದರೂ, ಮತ್ತೆ ಯಾರದೇ ಸುಳಿವಿರಲಿಲ್ಲ. ಮುಷ್ಕರದ ಮುನ್ಸೂಚನೆಗಳಿದ್ದರೂ ಹಲವು ಪ್ರಯಾಣಿಕರು ಪರ ಊರುಗಳಿಗೆ ತೆರಳಲು ಬಸ್‍ಗಳು ಸಿಕ್ಕಬಹುದೆನ್ನುವ ನಿರೀಕ್ಷೆಯಿಂದ ನಿಲ್ದಾಣಕ್ಕೆ ಆಗಮಿಸಿದ್ದರಾದರೂ ಬಳಿಕ ಹಿಂತೆರಳುವಂತಾಯಿತು.
ಮಡಿಕೇರಿ ನಗರದಲ್ಲಿ ಖಾಸಗಿ ಬಸ್, ವ್ಯಾನ್ ಹಾಗೂ ಇತರ ವಾಹನಗಳು ಮೈಸೂರು ಮತ್ತು ಮಂಗಳೂರು ಕಡೆಗೆ ಪ್ರಯಾಣಿಕರನ್ನು ಕರೆದೊಯ್ದವು. ಸರ್ಕಾರಿ ಬಸ್‍ನ ಕೊರತೆಯಿಂದಾಗಿ ಖಾಸಗಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿತ್ತು.
ಮುಷ್ಕರ ನಿರತ ರಸ್ತೆ ಸಾರಿಗೆ ನೌಕರರು ನಗರದಲ್ಲಿದ್ದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಿ, ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿಕೊಂಡರು.
ವೀರಾಜಪೇಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರರ ಮುಷ್ಕರದಿಂದಾಗಿ ತಾಲೂಕು ಕೇಂದ್ರ ವೀರಾಜಪೇಟೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಬಸ್‍ಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಪ್ರಯಾಣಿಕರು ಬಸ್‍ಗಳಿಲ್ಲದೆ ಹಿಂದಿರುಗುತ್ತಿದ್ದುದು ಕಂಡುಬಂದಿತು.
ಮುಷ್ಕರದಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೊಂದರೆಗೆ ಒಳಗಾದರು. ನಗರದ ಸಂತೆಯ ದಿನವಾದ ಬುಧವರ ಸಾರಿಗೆ ಬಸ್ ಅವಲಂಬಿಸಿದ್ದ ವ್ಯಾಪಾರಿಗಳು ಖಾಸಗಿ ವಾಹನಗಳ ಮೊರೆ ಹೋದರು. ಮುಷ್ಕರದ ವಿಚಾರ ಕೇಳಿಬರುತ್ತಿದ್ದಂತೆಯೇ ಮಂಗಳವಾರ ಸಂಜೆಯೇ ನಗರಕ್ಕೆ ಬರಬೇಕಿದ್ದ ಬಸ್‍ಗಳು ಬರಲಿಲ್ಲ. ಸರ್ಕಾರಿ ಬಸ್ ಮುಷ್ಕರದ ಬೆನ್ನಲ್ಲೇ ಕೆಲವು ಖಾಸಗಿ ಬಸ್‍ಗಳು ಮೈಸೂರು, ಬೆಂಗಳೂರು ಭಾಗಗಳಿಗೆ ತೆರಳಿದವು. ಸೋಮವಾರಪೇಟೆ ವಿಭಾಗದಲ್ಲೂ ಇದೇ ಪರಿಸ್ಥಿತಿ ಕಂಡು ಬಂದಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss