VIRAL VIDEO | ಉದ್ಯಮಿ ಆನಂದ್ ಮಹೀಂದ್ರ ಶೇರ್ ಮಾಡಿದ ಈ ವಿಡಿಯೋ ನೋಡಿ ನಗದವರಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ಟೀವ್ ಆಗಿದ್ದಾರೆ.

ಇತ್ತೀಚೆಗಷ್ಟೇ ಮತ್ತೊಂದು ವಿಡಿಯೋವನ್ನು ಆನಂದ್ ಮಹೀಂದ್ರ ಶೇರ್ ಮಾಡಿದ್ದಾರೆ. ಇದರಲ್ಲಿ ಮೂವರು ರಸ್ತೆ ಮೇಲೆ ನಿಂತಿದ್ದಾರೆ. ಮಳೆಯಿಂದಾಗಿ ರಸ್ತೆಯಲ್ಲಿ ಹೊಂಡದಂತಾಗಿದ್ದು, ನೀರು ನಿಂತಿದೆ.

ವಾಹನಗಳು ಬಂದು ಬಟ್ಟೆ ಮೇಲೆ ನೀರು ಎಗರಿಬಿಟ್ಟೀತು ಎಂದು ಭಯಬೀಳುವ ಜನರಿರುವಾಗ ಸ್ನಾನಕ್ಕೆ ರೆಡಿಯಾದಂತೆ, ಒಳಉಡುಪುಗಳನ್ನು ಮಾತ್ರ ತೊಟ್ಟು ಆ ರಸ್ತೆಯಲ್ಲಿ ಬರುವ ವಾಹನಗಳಿಗೆಲ್ಲ ನಮ್ಮ ಹತ್ತಿರ ಬನ್ನಿ, ನೀರು ನಮ್ಮ ಮೇಲೆ ಹಾರಲಿ ಎಂದು ತೋರಿಸುತ್ತಾ ನಗುತ್ತಿದ್ದಾರೆ.

ಈ ವಿಡಿಯೋ ಶೇರ್ ಮಾಡಿ ಇದು ಪ್ರತಿಕೂಲತೆಯೋ, ಅನುಕೂಲವೋ? ಎಲ್ಲವೂ ನಮ್ಮೊಳಗೇ ಇದೆ, ನಮ್ಮ ಆಟಿಟ್ಯೂಡ್‌ನಲ್ಲೇ ಇದೆ ಎಂದಿದ್ದಾರೆ.

https://twitter.com/anandmahindra/status/1661394135188905987?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!