ಪುಟಿನ್ ನನ್ನು ಹತ್ಯೆಗೈದು ಇಲ್ಲವೇ ಜೀವಂತ ಹಿಡಿದು ತರುವವರಿಗೆ 7.5 ಕೋಟಿ ನೀಡುವೆ: ಉದ್ಯಮಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ವಿರುದ್ಧ ಆನೇಕ ದೇಶಗಳಿಂದವಿರೋಧ ವ್ಯಕ್ತವಾಗುತ್ತಿದ್ದು, ಇದರ ಜೊತೆಗೆ ಅಧ್ಯಕ್ಷ ಪುಟಿನ್‌ ವಿರ್ಡ್ ರಷ್ಯನ್ನರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ .
ಇದರ ನಡುವೆ ರಷ್ಯಾದ ಉದ್ಯಮಿಯೋರ್ವರು ಪುಟಿನ್ ಹತ್ಯೆಗೈದು ಇಲ್ಲವೇ ಜೀವಂತ ಹಿಡಿದು ತರುವವರಿಗೆ 7.5 ಕೋಟಿ ರೂ(1 ಮಿಲಿಯನ್‌ ಡಾಲರ್) ಬಹುಮಾನ ನೀಡುವುದಾಗಿ ಫೇಸ್‌ಬುಕ್ ಮೂಲಕ ಘೋಷಣೆ ಮಾಡಿದ್ದಾರೆ.
ಅಲೆಕ್ಸ್ ಕೊನಾನಿಖಿನ್ ಲಿಂಕ್ಡಿನ್ʼನಲ್ಲಿ ಈ ಪೋಸ್ಟ್ ಮಾಡಿದ್ದು, ಪೋಸ್ಟ್ʼನಲ್ಲಿ, ‘ತಮ್ಮ ಸಾಂವಿಧಾನಿಕ ಕರ್ತವ್ಯವನ್ನ ಅನುಸರಿಸಿ, ರಷ್ಯಾ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಯುದ್ಧ ಅಪರಾಧಿಯಾಗಿ ಪುಟಿನ್ ಅವರನ್ನ ಬಂಧಿಸುವ ಅಧಿಕಾರಿ(ಗಳಿಗೆ) 1,000,000 ಅಮೆರಿಕನ್ ಡಾಲರುಗಳನ್ನು ಪಾವತಿಸುವುದಾಗಿ ನಾನು ಭರವಸೆ ನೀಡುತ್ತೇನೆ’ ಎಂದು ಅವರು ಬರೆದಿದ್ದಾರೆ.
ಈ ರೀತಿಯ ಘೋಷಣೆ ಬರೆದುಕೊಳ್ಳುತ್ತಿದ್ದಂತೆ ಅವರ ಖಾತೆಯ ಮೇಲೆ ಫೇಸ್‌ಬುಕ್‌ ನಿರ್ಬಂಧ ಹೇರಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!