ಹೊಸ ದಿಗಂತ ವರದಿ, ಮದ್ದೂರು:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗ ಅಂಗವಾಗಿ ಆರ್.ಎಸ್.ಎಸ್. ಗಣವೇಷಧಾರಿಗಳು ಪಟ್ಟಣ ಪ್ರಮುಖ ಬೀದಿಗಳಲ್ಲಿ ಭಾನುವಾರ ಪಥ ಸಂಚಲನ ನಡೆಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಘಟಕದ ವತಿಯಿಂದ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯ ಆವರಣದಿಂದ ಭಾರತಾಂಬೆಯ ಭಾವಚಿತ್ರದೊಂದಿಗೆ ನೂರಾರು ಗಣವೇಷಧಾರಿಗಳು ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸುವ ಮೂಲಕ ದೇಶ ಪ್ರೇಮ ಮೆರೆದರು.
ದೇಗುಲದ ಆವರಣದಿಂದ ಪೇಟೆ ಬೀದಿ, ಲೀಲಾವತಿ ಬಡಾವಣೆ, ಸರ್.ಎಂ.ವಿಶ್ವೇಶ್ವರಯ್ಯ ನಗರದ ಮೂಲಕ ತಾಲೂಕು ಕ್ರೀಡಾಂಗಣದವೆರೆಗೆ ಗಣವೇಷಧಾರಿಗಳು ಪಥ ಸಂಚನ ನಡೆಸುವುದರೊಂದಿಗೆ ದೇಶ ಪ್ರೆಮ ಹಾಗೂ ರಾಷ್ಟ್ರ ಭಕ್ತಿಯ ಭಕ್ತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಪಥ ಸಂಚಲನ ಸಾಗುವ ಮಾರ್ಗದ ರಸ್ತೆಯ ಇಕ್ಕೆಲುಗಳಲ್ಲಿ ಮಹಿಳೆಯರು ರಂಗೋಲಿಗಳನ್ನು ಬಿಟ್ಟು, ಪುರುಷರು, ಮಹಿಳೆಯರು ಮತ್ತು ಮಕ್ಕಳು ಗಣವೇಷಧಾರಿಗಳಿಗೆ ಪುಷ್ಪಾರ್ಚನೆ ಮಾಡಿ ಗಣೆವೇಷಧಾರಿಗಳಿಗೆ ಶುಭಕೋರಿದರು. ಅಲ್ಲದೆ, ಮೆರವಣಿಗೆ ಸಾಗುವ ಮಾರ್ಗಮಧ್ಯೆದಲ್ಲಿ ಎಡ ಮತ್ತು ಬಲ ಭಾದಲ್ಲಿ ಸಾರ್ವಜನಿಕರು ಶ್ರೀರಾಮಚಂದ್ರನ ಭಾವಚಿತ್ರ ಚಿತ್ರ ಪ್ರತಿಷ್ಟಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸುವುದೊಂದಿಗೆ ಗಣವೇಷಧಾರಿಗಳಗೆ ಹಿಂದುತ್ವಕ್ಕೆ ಬೆಂಬಲ ನೀಡಿದರು.
ಗಣವೇಷಧಾರಿಗಳು ಜಯರಾಮ್, ಶ್ರೀರಾಮ್ ಭಗವನಂತ ನಾಮಸ್ಮರಣೆ ಮಾಡುತಾ ನಾವುಗಳು ಹಿಂದು, ಹಿಂದು ದೇಶವನ್ನು ಸದೃಢಗೊಳಿಸುವ ಘೋಷಣೆಯೊಂದಿಗೆ ಪಥ ಸಂಚಲನ ನಡೆಸಿದರು.
ಗಣವೇಷಧಾರಿಗಳ ಪಥಸಂಚಲನದ ಹಿನ್ನೆಲೆಯಲ್ಲಿ ಪಟ್ಟಣದ ಪೇಟೆಬೀದಿಯನ್ನು ಮಧುವಣಗಿತ್ತಿಯಂತೆ ಶೃಂಗರಾ ಮಾಡಿದ್ದು, ಸಾರ್ವಜನಿಕರಿಗೆ ಹಬ್ಬದಂತೆ ಭಾಸವಾಗಿದ್ದು ವಿಶೇಷವಾಗಿತ್ತು.
ಪಥಸಂಚಲನೆಯಲ್ಲಿ ಮದ್ದೂರು ಮೆಡಿಕಲ್ ಸೆಂಟರ್ನ ಪಿಜಿಷಿಯನ್ ಮತ್ತು ಹೃದ್ರೋಗ ತಜ್ಞ ಡಾ.ಸಿದ್ದೇಗೌಡ, ಸ್ವಯಂ ಸೇವಕರಾದ ಸಿಪಾಯಿ ಶ್ರೀನಿವಾಸ್, ಗುರುಸ್ವಾಮಿ, ವೀರಭದ್ರಸ್ವಾಮಿ, ಸತೀಶ್, ಮಲ್ಲಿಕಾರ್ಜುನ್, ಚೇತನಾರಾಧ್ಯ, ಜಗನ್ನಾಥ್, ಅಲೋಕ ಸೇರಿದಂತೆ ಇತರರು ಇದ್ದರು.