Sunday, August 14, 2022

Latest Posts

ಡಾ.ಶಾಸ್ತ್ರೀಯವರ ಸಾವು ಶರಣಬಸವ ವಿಶ್ವವಿದ್ಯಾಲಯಕ್ಕೆ ತುಂಬಲಾರದ ನಷ್ಟ

ಹೊಸ ದಿಗಂತ ವರದಿ, ಕಲಬುರಗಿ:

ಬೀದರ ಜಿಲ್ಲೆಯ ಬಸವಕಲ್ಯಾಣದ ಬಳಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರೀ ಅವರಿಗೆ ಸಂತಾಪ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮತ್ತು ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಭಾಷಣಕಾರರು ಬಹುಮುಖ ವ್ಯಕ್ತಿತ್ವದ ಡಾ. ಲಿಂಗರಾಜ ಶಾಸ್ತ್ರೀಯವರು ವಿಶ್ವವಿದ್ಯಾಲಯಕ್ಕೆ ನೀಡಿದ ಕೊಡುಗೆ ಸ್ಮರಿಸಿದರು.
ಡಾ.ಶಾಸ್ತ್ರೀಯವರ ಸಹಪಾಠಿಯಾಗಿದ್ದ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು ಮಾತನಾಡಿ, ಡಾ. ಶಾಸ್ತ್ರಿಯವರ ವಿದ್ಯಾರ್ಥಿ ಜೀವನ, ರಾಜಕೀಯ ನಡೆ ಮತ್ತು ಶಿಕ್ಷಣ ತಜ್ಞರಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ತಮ್ಮ ಜೊತೆಗಿದ್ದ ಅವರ ದೀರ್ಘ ಒಡನಾಟವನ್ನು ನೆನಪಿಸಿಕೊಂಡರು.
ಡಾ.ಶಾಸ್ತ್ರೀಯವರ ಸಾವು ನನಗೆ ವೈಯಕ್ತಿಕವಾಗಿ ತೀವ್ರ ದುಃಖ ತಂದಿದೆ ಇದು ತುಂಬಲಾರದ ನಷ್ಟ ಎಂದರು.
ಡಾ.ಶಾಸ್ತ್ರೀಯವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿಯೂ, ವಿದ್ಯಾರ್ಥಿ ನಾಯಕರಾಗಿ ಮತ್ತು ರಾಜಕೀಯ ಕಾರ್ಯಕರ್ತರಾಗಿ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮ ಚಾಣಾಕ್ಷತೆಯನ್ನು ಪ್ರದರ್ಶಿಸುತ್ತಿದ್ದರು. ಹಲವು ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಡಾ. ಶಾಸ್ತ್ರೀಯವರು ತಮ್ಮನ್ನು ತಾವು ಶಿಕ್ಷಣತಜ್ಞರಾಗಿ ಪರಿವರ್ತಿಸಿ ಉತ್ತಮ ಶಿಕ್ಷಕರಾಗಿ ಅನೇಕರ ಮೆಚ್ಚುಗೆಯನ್ನು ಗಳಿಸಿದ್ದಾರೆ ಎಂದು ಶ್ರೀ ದೇಶಮುಖ ಹೇಳಿದರು. ಅವರ ಅಕಾಲಿಕ ಮರಣವು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲಯಕ್ಕೆ ತುಂಬಲಾರದ ನಷ್ಟವಾಗಿದೆ.
ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ.ವಿ.ನಿಷ್ಠಿ ಅವರು ಸಂತಾಪ ಸಭೆಯಲ್ಲಿ ಮಾತನಾಡುತ್ತಾ, ಉತ್ತಮ ಆಡಳಿತಗಾರರಾಗಿದ್ದ ಡಾ.ಶಾಸ್ತ್ರೀಯವರ ಸಾವಿನ ಸುದ್ದಿಯನ್ನು ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರಿಗೆ ತಿಳಿಸಿದಾಗ ತೀವ್ರ ಅಘಾತ ವ್ಯಕ್ತಪಡಿಸಿ ಅವರು ಹೇಳಿದ ಮೊದಲ ಪದವೆಂದರೆ,  ಡಾ.ಶಾಸ್ತ್ರೀಯವರ ಮಕ್ಕಳನ್ನು ಸಂಘ ಮತ್ತು ವಿಶ್ವವಿದ್ಯಾಲಯ ನೋಡಿಕೊಳ್ಳಬೇಕು” ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss