ಹೊಸ ದಿಗಂತ ವರದಿ, ಮಂಡ್ಯ:
ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದುಘಿ, ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಅಭ್ಯರ್ಥಿ ಬಿ.ಸಿ. ಮಂಜು ಸ್ಪಷ್ಟಪಡಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರತೀ ಚುನಾವಣೆಯಲ್ಲೂ ಬಿಜೆಪಿ ಬಗ್ಗೆ ಗೊಂದಲ ಮೂಡಿಸುವುದೇ ಅವರ ನಿತ್ಯದ ಕಾಯಕವಾಗಿದೆ. ಹಿಂದೆ ಡಾ. ಸಿದ್ದರಾಮಯ್ಯ ಸ್ಪರ್ಧಿಸಿದ್ದ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿಯ ಗೊಂದಲ ಮೂಡಿಸಿದ್ದರು. ಈ ಬಾರಿಯೂ ಅದೇ ತರಹದ ನಾಟಕವಾಡುತ್ತಿದ್ದಾರೆ ಎಂದು ಹೇಳಿದರು.
ದೆಹಲಿಯಲ್ಲಿ ಪ್ರಧಾನಿ ನರೇಂದ್ರಮೋದಿಯವರನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಂಸತ್ತಿನ ಕಲಾಪದ ಹಿನ್ನೆಲೆಯಲ್ಲಿ ಭೇಟಿ ಮಾಡಿದ್ದಾರೆಯೇ ವಿನಃ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆ ಬಗ್ಗೆ ಯಾವುದೇ ಪ್ರಸ್ತಾಪವೂ ಆಗಿಲ್ಲಘಿ. ಇದನ್ನು ಜೆಡಿಎಸ್ ಮತ್ತು ಕಾಂಗ್ರೆಸ್ಸಿಗರು ಮುನ್ನಲೆಗೆ ತಂದು ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎಲೆಕ್ಷನ್ ಟ್ರಿಕ್ಸ್ :
ಪ್ರತೀ ಚುನಾವಣೆಯಲ್ಲೂ ಮಾಡುವ ರೀತಿಯಲ್ಲೇ ಈ ಬಾರಿಯೂ ಎರಡೂ ಪಕ್ಷಗಳು ಎಲೆಕ್ಷನ್ ಟ್ರಿಕ್ಸ್ ಮಾಡುತ್ತಿವೆ. ಇಂತಹ ಗಾಳಿ ಸುದ್ಧಿಗೆ ಮತದಾರರು ಕಿವಿಗೊಡುವುದಿಲ್ಲ. ಪಕ್ಷದ ವರಿಷ್ಠರೂ ನಮಗೆ ಹಿಂದೆ ಸರಿಯುವಂತೆ ಸೂಚನೆಯನ್ನೂ ನೀಡಿಲ್ಲ. ನಮ್ಮಲ್ಲಿ ಇಂತಹ ಯಾವುದೇ ಬೆಳವಣಿಗೆಯೂ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.