Saturday, July 2, 2022

Latest Posts

ಉಪ ಚುನಾವಣೆ: ಬಿರು ಬಿಸಿಲಲ್ಲೂ ಮತದಾನದ ಉತ್ಸಾಹ

ಹೊಸ ದಿಗಂತ ವರದಿ, ಬೀದರ್ :

47-ಬಸವಕಲ್ಯಾಣ ಉಪ ಚುನಾವಣೆಗೆ ಏಪ್ರೀಲ್ 17ರಂದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 326 ಮತಗಟ್ಟೆಗಳಲ್ಲಿ ಮತದಾನವು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ನಡೆಯಿತು. ಎಂದಿನಂತೆ ಮತದಾನ ದಿನವಾದ ಏಪ್ರಿಲ್ 17ರಂದು ಕೂಡ ಬಿಸಿಲು ಪ್ರಖರವಾಗಿತ್ತು.
ಬಿಸಿಲನ್ನು ಲೆಕ್ಕಿಸದೇ ವಯೋವೃದ್ದರು, ವಿಕಲಚೇತನರಾದಿಯಾಗಿ ಅರ್ಹ ಮತದಾರರು, ಯುವಕರು ಮತಗಟ್ಟೆಳತ್ತ ಬಂದು ತಮ್ಮ ಮತಹಕ್ಕನ್ನು ಚಲಾಯಿಸುತ್ತಿರುವುದು ಕಂಡು ಬಂದಿತು.

ಬೆಳಗಿನ 10 ಗಂಟೆಗೆ
ಬೆಳಗಿನ 10 ಗಂಟೆ ವೇಳೆಗೆ ಮುಚಳಂಬ ಗ್ರಾಮದ ಸಹಿಪಾ ಶಾಲೆಯ ಆವರಣದಲ್ಲಿದ್ದ ಮತಗಟ್ಟೆ ಸಂಖ್ಯೆ 41ರಲ್ಲಿ ಒಟ್ಟು 911ಮತದಾರರ ಪೈಕಿ 126 ಜನರು, ಮತಗಟ್ಟೆ ಸಂಖ್ಯೆ 40ರಲ್ಲಿ ಒಟ್ಟು 879 ಮತದಾರರ‌ ಪೈಕಿ 104 ಜನರು, ಮತಗಟ್ಟೆ ಸಂಖ್ಯೆ 42ರಲ್ಲಿ 849 ಮತದಾರರ ಪೈಕಿ 87 ಜನರು ಮತ ಚಲಾಯಿಸಿದ್ದರು.
ಧನ್ನೂರ (ಕೆ)ವಾಡಿ ಮತಗಟ್ಟೆ ಸಂಖ್ಯೆ 50ರಲ್ಲಿ ಒಟ್ಟು 843 ಮತದಾರರ ಪೈಕಿ 200 ಜನರು ಮತದಾನ ಮಾಡಿದ್ದರು.

ಬೆಳಗಿನ 11 ಗಂಟೆವರೆಗೆ
ಬೆಳಗಿನ 11 ಗಂಟೆವರೆಗೆ ಬಸವಕಲ್ಯಾಣ‌ ನಗರದ ಶ್ರೀ ಜಿಜಾಮಾತಾ ಪ್ರೌಢಶಾಲೆಯಲ್ಲಿ ಇರುವ ಮತಗಟ್ಟೆ ಸಂಖ್ಯೆ 80ರಲ್ಲಿ ಒಟ್ಟು 745 ಮತದಾರರ ಪೈಕಿ 174 ಜನರು, ಮತಗಟ್ಟೆ 80ಎನಲ್ಲಿ ಒಟ್ಟು 732 ಮತದಾರರ ಪೈಕಿ 78 ಜನರು ಮತ ಚಲಾಯಿಸಿದ್ದರು.

ಸಿಎಸ್ಐಟಿಸಿ ಬಸವಕಲ್ಯಾಣ

ಬಸವಕಲ್ಯಾಣದ ಸಿಎಸ್ ಐಟಿಸಿ ಆವರದಲ್ಲಿ ಒಟ್ಟು ನಾಲ್ಕು ಮತಗಟ್ಟೆಗಳಿದ್ದವು. ಬೆಳಗಿನ 11 ಗಂಟೆವರೆಗೆ ಮತಗಟ್ಟೆ ಸಂಖ್ಯೆ 92ರಲ್ಲಿ ಒಟ್ಟು 592 ಮತದಾರರ ಪೈಕಿ 137 ಜನರು, ಮತಗಟ್ಟೆ ಸಂಖ್ಯೆ 87ರಲ್ಲಿ 649 ಮತದಾರರ ಪೈಕಿ 150 ಜನರು, ಮತಗಟ್ಟೆ ಸಂಖ್ಯೆ 88ರಲ್ಲಿ 1128 ಮತದಾರರ ಪೈಕಿ 190 ಜನರು, ಮತಗಟ್ಟೆ ಸಂಖ್ಯೆ 92/ಎ ನಲ್ಲಿ 583 ಮತದಾರರ ಪೈಕಿ
157 ಜನರು ಮತದಾನ ಮಾಡಿದ್ದರು.

12 ಗಂಟೆವರೆಗೆ ಶೆ.30ರಷ್ಟು ಮತದಾನ
ಬಸವಕಲ್ಯಾಣದ ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿರುವ ಮತಗಟ್ಟೆ ಸಂಖ್ಯೆ 101ರಲ್ಲಿ 775 ಮತದಾರರ ಪೈಕಿ 241 ಮತ ಚಲಾವಣೆಗೊಂಡು ಶೇ.30ರಷ್ಡು ಮತದಾನದ ಪ್ರಮಾಣ ದಾಖಲಾಗಿತ್ತು. ಮತ್ತೊಂದು ಮತಗಟ್ಟೆ100ರಲ್ಲಿ 1098 ಮತದಾರರ ಪೈಕಿ 196 ಜನರು ಮತದಾನ ಮಾಡಿದ್ದರು.

ಮಧ್ಯಾಹ್ನ 4 ಗಂಟೆಗೆ ಶೇ.50ರಷ್ಡು ಮತದಾನ:

ಇಲ್ಲಾಳ ಗ್ರಾಮದ ಸಹಿಪ್ರಾ ಶಾಲೆಯ ಮತಗಟ್ಟೆ ಸಂಖ್ಯೆ 175 ರಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ 776 ಮತದಾರರ ಪೈಕಿ 456 ಜನರು ಮತಹಕ್ಕನ್ನು ಚಲಾಯಿಸಿದ್ದರು. ಸಂಜೆ 4 ಗಂಟೆ ಅವಧಿಗೆ ಮುಚಳಂಬ ಗ್ರಾಮದ ಸಹಿಪ್ರಾ ಶಾಲೆ ಮತಗಟ್ಟೆ ಸಂಖ್ಯೆ 40ರಲ್ಲಿ ಶೇ.50ರಷ್ಟು ಮತದಾನವಾಗಿತ್ತು.

ಅಪರ್ಣಾ, ಪೂಜಾರಾಣಿ ಖುಷಿ
ಮುಚಳಂಬ ಗ್ರಾಮದ ಎಂಎಸ್ ಸಿ ವಿದ್ಯಾರ್ಥಿನಿ ಅಪರ್ಣಾ ಮತ್ತು ಎಂಕಾಮ್ ವಿದ್ಯಾರ್ಥಿನಿ ಪೂಜಾರಾಣಿ ಅವರು ಮೊದಲನೆ ಬಾರಿಗೆ ಓಟು ಚಲಾಯಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ವಯೋವೃದ್ಧೆ ಮೆಹತಾಬಿ ಅವರು ಬೇಟಬೆಳಕುಂದಾದ ಮಹಿಳಾ ಸ್ನೇಹಿ ಮತಗಟ್ಟೆಗೆ ಆಗಮಿಸಿ ಮತದಾನ‌ ಮಾಡಿದ್ದು ಕೂಡ ವಿಶೇಷವಾಗಿತ್ತು.

ಜಿಲ್ಲಾಧಿಕಾರಿಗಳಿಂದ ಪರಿಶೀಲನೆ
ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಏಪ್ರೀಲ್ 17ರಂದು ಬೆಳಗ್ಗೆ ವಿವಿಧ ಮತಗಟ್ಟೆಗಳಿಗೆ ಭೇಟಿ‌ ನೀಡಿದರು. ಮತ್ತೆ ಮಧ್ಯಾಹ್ನ ವೇಳೆಗೆ ಬಸವಕಲ್ಯಾಣದ ಇಲ್ಲಾಳ‌ ಮತ್ತು ಮುಚಳಂಬ ಗ್ರಾಮಗಳ‌ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯದಲ್ಲಿ ಸಕ್ರೀಯ ಭಾಗಿಯಾದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ, ಬಿಎಲ್ಓ ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇನ್ನೀತರ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss